ಪ್ರಜಾಸ್ತ್ರ ಸುದ್ದಿ
ಭವಾನಿಪುರ(Bhavanipur)(ಆಸ್ಸಾಂ): ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೋಮವಾರ ಬಾರ್ ಪೇಟಾ ಜಿಲ್ಲೆಯಲ್ಲಿ ರ್ಯಾಲಿ ನಡೆಸಿದರು. ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಗಂಭೀರ ಆರೋಪಗಳನ್ನು ಮಾಡಿದರು. ಕಾಂಗ್ರೆಸ್ ಕೇವಲ ಎರಡು ಕೆಲಸಗಳನ್ನು ಮಾಡುತ್ತದೆ. ಒಂದು ಸುಳ್ಳು ಹೇಳುವುದು. ಮತ್ತೊಂದು ಭ್ರಷ್ಟಾಚಾರ ನಡೆಸುವುದು ಎಂದರು.
ನಾವು ಸರ್ಜಿಕಲ್ ಸ್ಟ್ರೈಕ್ ಅಥವ ಆಫರೇಷನ್ ಸಿಂಧೂರ ಇರಲಿ ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನಕ್ಕೆ ಪ್ರಾಮುಖ್ಯತೆ ನೀಡುತ್ತದೆ. ಕಾಂಗ್ರೆಸ್ ನ ಪಾಕ್ ಪ್ರೀತಿ ಭಾರತಕ್ಕೆ ಹೊರೆಯಾಗಿ ಪರಿಣಮಿಸಿದೆ. ಅವರದ್ದು ಪ್ರೀತಿಯ ಅಂಗಡಿ ಅಲ್ಲ. ಸುಳ್ಳಿನ ಅಂಗಡಿ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.




