Ad imageAd image

ಓದಿನಿಂದಲೇ ಬದುಕು ಉಜ್ವಲ: ಸಿದ್ದಬಸು ಕುಂಬಾರ

ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಓದಿನಿಂದಲೆ ನಮ್ಮ ಬದುಕು ಉಜ್ವಲವಾಗುತ್ತದೆ ಎಂದು ನಿವೃತ್ತ ಗ್ರಂಥಪಾಲಕ ಸಿದ್ದಬಸು ಕುಂಬಾರ ಹೇಳಿದರು.

Nagesh Talawar
ಓದಿನಿಂದಲೇ ಬದುಕು ಉಜ್ವಲ: ಸಿದ್ದಬಸು ಕುಂಬಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಓದಿನಿಂದಲೆ ನಮ್ಮ ಬದುಕು ಉಜ್ವಲವಾಗುತ್ತದೆ ಎಂದು ನಿವೃತ್ತ ಗ್ರಂಥಪಾಲಕ ಸಿದ್ದಬಸು ಕುಂಬಾರ ಹೇಳಿದರು. ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ(CM Managoli) ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಪಾಲಕರ ದಿನಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉತ್ತಮ ಹಾಗೂ ಸುಸಜ್ಜಿತ ಗ್ರಂಥಾಲಯ ಓದಿನ ಕಡೆಗೆ ನಮ್ಮನ್ನು ಸೆಳೆದುಕೊಳ್ಳುತ್ತದೆ. ಶಾಲಾ, ಕಾಲೇಜುಗಳ(School and College) ಮತ್ತು ನಗರದ ಅನೇಕ ಗ್ರಂಥಾಲಯದಲ್ಲಿ(Library) ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯವನ್ನು ಓದಿಗಾಗಿ ಉಪಯೋಗ ಮಾಡಿಕೊಳ್ಳಬೇಕು. ಇಂದು ಜಗತ್ತು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಜಗತ್ತಿನ ಜ್ಞಾನವನ್ನು ನಾವೆಲ್ಲ ಹೆಚ್ಚು ಹೆಚ್ಚು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಚಾರ್ಯ ಡಾ.ಬಿ.ಜಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಅರವಿಂದ ಮನಗೂಳಿ, ಎಸ್.ಎಮ್.ಬಿರಾದಾರ, ಎಸ್.ಕೆ.ಹೂಗಾರ, ಡಾ.ಆರತಿ ಅರಳಗುಂಡಗಿ, ಜ್ಯೋತಿ ಹಿಟ್ನಳ್ಳಿ, ಸುಧಾ ಮಹಿಶಾಳೆ, ಗೀತಾ ಮುರಗಾನೂರ, ಜಿ.ಎಸ್.ಬಡಿಗೇರ, ಜೆ.ಎಸ್.ಹಿಟ್ನಳ್ಳಿ, ಮಹಾಂತೇಶ ಸುಂಗಠಾಣ, ಡಾ.ಅಂಬರೀಶ ಬಿರಾದಾರ, ಗ್ರಂಥಪಾಲಕ ಸತೀಶ ಬಿರಾದಾರ, ರಮೇಶ ಯಂಕಂಚಿಕರ, ವಿ.ಬಿ.ಪಾಟೀಲ, ಎಸ್.ವೈ ನಾಯ್ಕೋಡಿ, ಎಸ್.ಗುರಲಿಂಗಪ್ಪ, ಎಸ್.ಎಂ.ಅರ್ಜುಣಗಿ, ಎಸ್.ಎಂ.ಇಂಗಳೆ ಸೇರಿದಂತೆ ಅನೇಕರು ಇದ್ದರು.

WhatsApp Group Join Now
Telegram Group Join Now
Share This Article