ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಸಿಲಿಕಾನ್ ಸಿಟಿಯಲ್ಲಿನ ಅನ್ನಪೂರ್ಣೇಶ್ವರ ನಗರ ಪೊಲೀಸ್ ಠಾಣೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಈ ಸಂಬಂಧ ಪಿಎಸ್ಐ, ಇಬ್ಬರು ಕಾನ್ಸ್ ಟೇಬಲ್ ಸೇರಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪಿಎಸ್ಐ ಎ.ವಿ ಕುಮಾರ್ ಎ1 ಆರೋಪಿಯಾಗಿದ್ದಾರೆ. ಕಾನ್ಸ್ ಟೇಬಲ್ ಗಳಾದ ಉಮೇಶ್, ಇನ್ನೋರ್ವ ಹಾಗೂ ನಾಲ್ವರು ಖಾಸಗಿ ವ್ಯಕ್ತಿಗಳ ಮೇಲೆ ಕೇಸ್ ಆಗಿದೆ.
ಕಳೆದ ವಾರ ಹೋಟೆಲ್ ಮೇಲೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಾನ್ಸ್ ಟೇಬಲ್ ಗಳು ಹೋಟೆಲ್ ನಲ್ಲಿ ಡೀಲ್ ನಡೆಸಿರುವುದು ಬೆಳಕಿಗೆ ಬಂದಿದೆ. ವೈಯಕ್ತಿಕ ಪ್ರಭಾವ ಬೀರಿ ಮನೆಗೆ ನುಗ್ಗಿ ಬೆದರಿಕೆ ಹಾಕಿರುವ ವಿಡಿಯೋ ಸಹ ಲಭ್ಯವಾಗಿದೆ. ಭ್ರಷ್ಟಾಚಾರ ತಡೆ ಕಲಂ 7ಎ ಅಡಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಎ.ವಿ ಕುಮಾರಗೆ ಮುಖ್ಯಮಂತ್ರಿ ಚಿನ್ನದ ಪದಕ ಬಂದಿತ್ತು. ಈ ಘಟನೆ ಬಳಿಕ ಕಾರ್ಯಕ್ರಮದಿಂದ ದೂರು ಉಳಿದರು. ಲೋಕಾಯುಕ್ತರು ಇದೀಗ ತನಿಖೆ ನಡೆಸಿದ್ದಾರೆ.
ಪ್ರಕರಣದ ಹಿನ್ನಲೆ: ಮನೆಯನ್ನು ಭೋಗಕ್ಕೆ ನೀಡುತ್ತೇವೆಂದು ಹೇಳಿ 60 ಲಕ್ಷ ರೂಪಾಯಿ ಪಡೆದು ವಾಪಸ್ ನೀಡುತ್ತಿಲ್ಲವೆಂದು ಸಿವಿಲ್ ಗುತ್ತಿಗೆದಾರ ಚನ್ನೇಗೌಡ ಹಾಗೂ ಇವರ ಪತ್ನಿ ಅನುಷಾ ವಿರುದ್ಧ ಸೋಮೇಶ್ವರ್ ಆರಾಧ್ಯ ಎಂಬುವರು 2024ರಲ್ಲಿ ಅನ್ನಪೂರ್ಣೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಣ ಕೇಳಿದರೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಪಿಎಸ್ಐ ಎ.ವಿ ಕುಮಾರ್, ಚನ್ನೇಗೌಡ ಪತ್ನಿ ಅನುಷಾ ಸರ್ಕಾರಿ ನೌಕರಿಯಲ್ಲಿದ್ದು ತೊಂದರೆಯಾಗುತ್ತದೆ. ರಾಜಿ ಮಾಡಿಕೊಳ್ಳಿ ಪ್ರಕರಣ ಮುಗಿಸಬಹುದು ಎಂದಿದ್ದಾರೆ. ಮುಂದೆ 4 ಕೋಟಿ ಮೌಲ್ಯದ ಮನೆಯನ್ನು 60 ಲಕ್ಷಕ್ಕೆ ಕೇಳಿ ತಾವು ಹೇಳಿದವರಿಗೆ ಕೊಡಬೇಕು ಎಂದು ಅಧೀನ ಸಿಬ್ಬಂದಿಗೆ ಮನೆಗೆ ಕಳಿಸಿದ್ದರು. ಬೆದರಿಕೆ ಹಾಕಿದ್ದಾರೆ ಎಂದು ಚನ್ನೇಗೌಡ, ಅನುಷಾ ದಂಪತಿ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಹೋಟೆಲ್ ಗೆ ಹೊರಟಿದ್ದ ಕುಮಾರ್ ಇಲಾಖೆಯ ಜೀಪ್ ಅನ್ನು ಮನೆಯ ಹತ್ತಿರ ಬಿಟ್ಟು ಓಡಿ ಹೋಗಿದ್ದಾರೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.