ಪ್ರಜಾಸ್ತ್ರ ಸುದ್ದಿ
ದಾವಣಗೆರೆ(Davanagere): ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜೂನಿಯರ್ ಎಂಜಿನಿಯರ್ ಬಿ.ಎಸ್ ನಡುವಿನಮನೆ ಹಾಗೂ ಕೆಆರ್ ಐಡಿಎಲ್ ಎಇಇ ಜಗದೀಶ ನಾಯ್ಕ ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ನಗರದ ಸರಸ್ವತಿ ಬಡಾವಣೆಯಲ್ಲಿರುವ ನಡುವಿನಮನೆಯವರ ಮನೆ, ಎಪಿಎಂಸಿ ಹತ್ತಿರವಿರುವ ಉಗ್ರಾಣದ ಕಚೇರಿ, ಜಗದೀಶಯವರಿಗೆ ಸೇರಿದ ಶಿವಮೊಗ್ಗದಲ್ಲಿನ ಮೂರು ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.