ಪ್ರಜಾಸ್ತ್ರ ಸುದ್ದಿ
ಭೋಪಾಲ್(Bhopal): ಅಕ್ರಮ ಮೂಲಕ ಹಣ ಸಂಪಾದನೆ ಮಾಡುವುದು ಎಲ್ಲರಿಗೂ ಇದೀಗ ತುಂಬ ಸುಲಭದ ಹಾದಿಯಾಗಿದೆ. ಮೊದಲು ರಾಜಕಾರಣಿಗಳು, ಉದ್ಯಮಿಗಳು ಮನೆಯಲ್ಲಿ ಕೋಟಿ ಕೋಟಿ ಹಣ, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗುತ್ತಿತ್ತು. ಈಗ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗುತ್ತಿದೆ. ಇಲ್ನೊಡಿ ಮಾಜಿ ಕಾನ್ಸ್ ಟೇಬಲ್ ಮನೆಯಲ್ಲಿ ಬರೋಬ್ಬರಿ 2.85 ಕೋಟಿ ರೂಪಾಯಿ ನಗದು ಸೇರಿ 3 ಕೋಟಿಗೂ ಹೆಚ್ಚು ಆಸ್ತಿ ಪತ್ತೆಯಾಗಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಮಧ್ಯಪ್ರದೇಶದ ಭೋಪಾಲದಲ್ಲಿ ಸಾರಿಗೆ ಇಲಾಖೆಯ ಮಾಜಿ ಕಾನ್ಸ್ ಟೇಬಲ್ ಮನೆಯಲ್ಲಿ 200 ಮುಖ ಬೆಲೆಯ ಕಂತೆ ಕಂತೆ ನೋಟುಗಳು, 40 ಕೆಜಿ ಬೆಳ್ಳಿಯ ಗಟ್ಟಿ, 50 ಲಕ್ಷ ಮೌಲ್ಯದ ಚಿನ್ನಾಭರಣ, ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.