ಪ್ರಜಾಸ್ತ್ರ ಸುದ್ದಿ
ಗದಗ(Gadaga): ಸರ್ಕಾರಿ ಕೆಲಸಕ್ಕೆ ಸೇರುವುದು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡುವುದಕ್ಕಾಗಿ ಅನ್ನೋವಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆಯುತ್ತಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಿಸಿಎಂ ಅಧಿಕಾರಿಯ ಮನೆ ಮೇಲೆ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರಿಗೆ ಶೇಕಡ 227ರಷ್ಟು ಹೆಚ್ಚು ಮೌಲ್ಯದ ಆಸ್ತಿ ಪತ್ತೆಯಾಗಿದೆ. ಬಿಸಿಎಂ ಅಧಿಕಾರಿ ಎಂ.ಕೆ ಸುರಕೋಡ ಮನೆಯಲ್ಲಿ ಮಕ್ಕಳಿಗೆ ಕೊಡಬೇಕಿದ್ದ ಬೆಡ್ ಶೀಟ್, ಹಾಸಿಗೆ, ನೋಟ್ ಬುಕ್ ಗಳು, ಅಡುಗೆ ಮಾಡುವ ಬೃಹತ್ ಪಾತ್ರೆಗಳು ಸಹ ಪತ್ತೆಯಾಗಿವೆ.
13 ಲಕ್ಷ ಮೌಲ್ಯದ 6 ನಿವೇಶನ, 45 ಲಕ್ಷದ ಮನೆ, 80.77 ಲಕ್ಷ ಮೌಲ್ಯದ 29 ಎಕರೆ ಜಮೀನು, ಸೇರಿ ಒಟ್ಟು 1.38 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳು ಸಿಕ್ಕಿವೆ. ಜೊತೆಗೆ 23.21 ಲಕ್ಷ ಮೌಲ್ಯದ 152 ಗ್ರಾಂ ಚಿನ್ನಾಭರಣ, 2.05 ಲಕ್ಷ ಮೌಲ್ಯದ ಬೆಳ್ಳಿ, 31.40 ಲಕ್ಷ ಮೌಲ್ಯದ ವಾಹನಗಳು, 89 ಸಾವಿರ ರೂಪಾಯಿ ನಗದು ಸೇರಿ 1.82 ಕೋಟಿ ಆಸ್ತಿ ಪತ್ತೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.




