ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗುರುವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಅವರಿಗೆ ಸಂಬಂಧಿದ ಪ್ರದೇಶ, ಮನೆ, ಕಚೇರಿ ಸೇರಿ 25 ಕಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ಈ ವೇಳೆ ಪತ್ತೆಯಾದ ಚಿನ್ನಾಭರಣ, ವಜ್ರದ ಆಭರಣಗಳು, ಬೆಳ್ಳಿ ವಸ್ತುಗಳು, ಬ್ರ್ಯಾಂಡೆಡ್ ಕಂಪನಿಯ ದುಬಾರಿ ವಸ್ತುಗಳು, ಕಂತೆ ಕಂತೆ ಹಣ ನೋಡಿದ ಲೋಕಾಯುಕ್ತರೆ ಶಾಕ್ ಆಗಿದ್ದಾರೆ.
ಅಕ್ರಮವಾಗಿ ಸಂಪಾದಿಸಿದ ಇಷ್ಟೊಂದು ಸಿರಿ ಸಂಪತ್ತು ನೋಡಿ ಲೋಕಾಯುಕ್ತ ಅಧಿಕಾರಿಗಳಿಗೆ ಅಚ್ಚರಿ ಎನಿಸುವುದಿಲ್ಲ. ಯಾಕಂದರೆ ಅವರು ಪ್ರತಿ ಸಾರಿ ದಾಳಿ ಮಾಡಿದಾಗೆಲ್ಲ ದಾಳಿಗೊಳಗಾದ ಅಧಿಕಾರಿಗಳ ಮನೆಗಳಲ್ಲಿ ಇಷ್ಟೊಂದು ಸಿಕ್ಕೆ ಸಿಗುತ್ತೆ. ಆದರೆ, ಅವರ ಗಳಿಕೆ ಮೂಲಕ, ಕಂಡು ಮಾರ್ಗ ನೋಡಿದಾಗ ಅಚ್ಚರಿ ಎನಿಸುತ್ತೆ. ಬೆಂಗಳೂರಿನ ಟೌನ್ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಅಧಿಕಾರದಲ್ಲಿರುವುದೇ ಊರನ್ನು ಗುಡಿಸಿ ಗುಂಡಾಂತರ ಮಾಡುವುದಕ್ಕೆ ಎನ್ನುವಷ್ಟರ ಮಟ್ಟಿಗೆ ಅಕ್ರಮವಾಗಿ ಸಂಪಾದಿಸಿದ್ದಾರೆ. ಈತನ ಮನೆಯಲ್ಲಿ ಎಲ್ಲಿ ನೋಡಿದರೂ ಚಿನ್ನಾಭರಣ, ವಜ್ರಗಳು, ಬೆಳ್ಳಿ ವಸ್ತುಗಳು, ಬ್ರ್ಯಾಂಡೆಡ್ ಐಟಂಗಳು.
ಮಂಡ್ಯದಲ್ಲಿ ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ನಿವಾಸ, ಮಳವಳ್ಳಿಯಲ್ಲಿರುವ ಮನೆ, ಪತ್ನಿಗೆ ಸಂಬಂಧಿಸಿದ ಪೆಟ್ರೋಲ್ ಬಂಕ್ ಸೇರಿ ಹಲವು ಕಡೆ ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಕಾವೇರಿ ನೀರಾವರಿಯಿಂದ ಜನರಿಗೆ ನೀರು ಹರಿಸಿದಕ್ಕಿಂತ ಪೆಟ್ರೋಲ್ ಬಂಕ್ ರೀತಿ ಹಣದ ಹೊಳೆಯನ್ನು ತಮ್ಮ ಮನೆಯೊಳಗೆ ಹರಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಗಣಿ ಅಧಿಕಾರಿಯಾಗಿದ್ದ ಕೃಷ್ಣವೇಣಿ ಕಳೆದ 2 ತಿಂಗಳ ಹಿಂದೆ ಮಂಗಳೂರಿಗೆ ವರ್ಗವಾಗಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯನ್ನೇ ಹಣದ ಇಲಾಖೆ ಮಾಡಿಕೊಂಡಿದ್ದಾರೆ. ಹೀಗೆ ಒಬ್ಬೊಬ್ಬ ಅಧಿಕಾರಿ ಕೋಟಿ ಕೋಟಿ ಬೆಲೆಗೆ ಬಾಳುವಷ್ಟರ ಮಟ್ಟಿಗೆ ಅಕ್ರಮ ಸಂಪಾದನೆ ಮಾಡುತ್ತಿದ್ದು, ಸಾಮಾನ್ಯ ಜನರ ಹಿಡಿ ಶಾಪ ಅವರಿಗೆ ಯಾವಾಗ ತಟ್ಟುತ್ತೆ ಅಂತಿದ್ದಾರೆ.