ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಅಪ್ರಾಪ್ತೆಯನ್ನು ಅಪಹರಣ ಮಾಡಿ ರಾಯಚೂರು, ಬಾಗಲಕೋಟೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಪ್ರಕರಣ ಸಂಬಂಧ ಸ್ವಯಂಘೋಷಿತ ಸ್ವಾಮೀಜಿಯೊಬ್ಬರನ್ನು ಬಂಧಿಸಲಾಗಿದೆ. ಆತನ ಮಠದಲ್ಲಿ ಮಚ್ಚು, ಲಾಂಗ್ ಗಳು ಪತ್ತೆಯಾಗಿವೆ. ಆತನ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.
ರಾಯಭಾಗ ತಾಲೂಕಿನ ಮೆಖಳಿ ಗ್ರಾಮದ ಲೋಕೇಶ್ವರ ಸ್ವಾಮಿ ಎಂಬಾತ ಮೂಡಲಗಿ ತಾಲೂಕಿನ ಅಪ್ರಾಪ್ತೆಯನ್ನು, ನಾನು ನಿಮ್ಮ ಕುಟುಂಬಕ್ಕೆ ಪರಿಚಯಸ್ಥ. ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಹತ್ತಿಸಿಕೊಂಡು ಮನೆ ಬಂದರೂ ನಿಲ್ಲಿಸದೆ ಬಾಗಲಕೋಟೆ ಮೂಲಕ ರಾಯಚೂರಿಗೆ ಹೋಗಿ ಲಾಡ್ಜ್ ನಲ್ಲಿ ಅತ್ಯಾಚಾರ ಮಾಡಿದ್ದು, ನಂತರ ಮಹಾಲಿಂಗಪುರದ ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದಾನೆ. ಮನೆಯಲ್ಲಿ ವಿಷಯ ಹೇಳಿದರೆ ಜೀವ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಅಂತಾ ಪೋಷಕರಿಗೆ ಹೇಳಿದ್ದಾಳೆ ಎಂದು ಹೇಳುತ್ತಿದ್ದಾರೆ.
ಮಠದಲ್ಲಿ ಲಾಂಗು, ಮಚ್ಚುಗಳು ಸಿಕ್ಕಿವೆ. ಲಾಡ್ಜ್ ಸೇರಿದಂತೆ ಎಲ್ಲ ಕಡೆ ಪರಿಶೀಲನೆ ನಡೆಸಲಾಗುತ್ತಿದೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.