Ad imageAd image

ಲಾರಿ-ಬೈಕ್ ಅಪಘಾತ: ತಂದೆ, ತಾಯಿ, ಮಗಳು ಸಾವು

Nagesh Talawar
ಲಾರಿ-ಬೈಕ್ ಅಪಘಾತ: ತಂದೆ, ತಾಯಿ, ಮಗಳು ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ರಾಯಬಾಗ(Rayabhaga): ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ಹತ್ತಿರ ನಡೆದಿದೆ. ಗಿರೇಪ್ಪಾ ಕುದ್ರಾಳಿ(38), ಪತ್ನಿ ಮಂಜುಳಾ(28) ಹಾಗೂ ಮಗಳು ಆರಾಧ್ಯ(07) ಮೃತ ದುರ್ದೈವಿಗಳಾಗಿದ್ದಾರೆ.

ಮೃತರು ಮಹಾರಾಷ್ಟ್ರದ ಮಿರಜ್ ಮೂಲದವರೆಂದು ಹೇಳಲಾಗುತ್ತಿದೆ. ಮಿರಜ್ ನಿಂದ ಜಮಖಂಡಿಗೆ ಬೈಕ್ ನಲ್ಲಿಯೇ ಹೋಗುತ್ತಿದ್ದರು ಎನ್ನಲಾಗುತ್ತಿದೆ. ಜಮಖಂಡಿ-ಮಿರಜ್ ರಾಜ್ಯ ಹೆದ್ದಾರಿಯ ಬಳಿ ಇಂತಹದೊಂದು ಭೀಕರ ಅಪಘಾತ ನಡೆದಿದೆ. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

WhatsApp Group Join Now
Telegram Group Join Now
Share This Article