Ad imageAd image

ಬೇಕರಿಗೆ ನುಗ್ಗಿದ ಲಾರಿ, ಇಬ್ಬರ ಸಾವು

Nagesh Talawar
ಬೇಕರಿಗೆ ನುಗ್ಗಿದ ಲಾರಿ, ಇಬ್ಬರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ತುಮಕೂರು(Tumakoru): ಗೊಬ್ಬರ ತುಂಬಿದ್ದ ಲಾರಿಯೊಂದ ಬೇಕರಿಗೆ ನುಗ್ಗಿದ ಪರಿಣಾಮ ಇಬ್ಬರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಹತ್ತಿರ ಮಂಗಳವಾರ ನಡೆದಿದೆ. ರಂಗಶಾಮಯ್ಯ(65) ಹಾಗೂ ಬೈಲಪ್ಪ(65) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ಬೇಕರಿಗೆ ನುಗ್ಗಿದೆ. ಈ ವೇಳೆ ಇಲ್ಲಿ 6 ಜನರು ಕೆಲಸ ಮಾಡುತ್ತಿದ್ದರು. ಕಾಟೇನಹಳ್ಳಿ ನಿವಾಸಿ ರಂಗಶಾಮಯ್ಯ, ಪುರದಳ್ಳಿಯ ನಿವಾಸಿ ಬೈಲಪ್ಪ ಎಂಬುವರು ಮೃತಪಟ್ಟಿದ್ದಾರೆ. ಮೋಹನಕುಮಾರ್, ಜಯಣ್ಣ, ಕಾಂತರಾಜು ಹಾಗೂ ಸಿದ್ದಗಂಗಮ್ಮ ಅನ್ನೋ ನಾಲ್ವರು ಗಾಯಗೊಂಡಿದ್ದಾರೆ. ಈ ಬಗ್ಗೆ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article