ಪ್ರಜಾಸ್ತ್ರ ಸುದ್ದಿ
ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ವಿರುದ್ಧ ಇದೀಗ ಕಥೆ ಕದ್ದ ಆರೋಪ ಕೇಳಿ ಬಂದಿದೆ. ಇವರ ಲವ್ ಮಾಕ್ಟೇಲ್ ಸರಣಿಯ 3ನೇ ಸಿನಿಮಾದ ಕಥೆ ಬಗ್ಗೆ ಕಥೆಗಾರ, ನಿರ್ದೇಶಕ ರಾಘವೇಂದ್ರ ಎಂ.ನಾಯ್ಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 2023ರಲ್ಲಿ ಕೃಷ್ಣ ಅವರನ್ನು ನಿರ್ದೇಶಕ ಗುರು ದೇಶಪಾಂಡೆ ಅವರು ಭೇಟಿ ಮಾಡಿಸಿದ್ದರು. ಆಗ ಈ ಕಥೆ ಹೇಳಿದ್ದೆ. ಆಗ ನಾವು ಕೂಡ ಲವ್ ಮಾಕ್ಟೇಲ್-3 ಸಿನಿಮಾ ಮಾಡುತ್ತಿದ್ದು, ಅದು ಕೂಡ ಮಗುವಿನ ಕಥೆಯಿದೆ. ಸ್ಕ್ರಿಪ್ಟ್ ಕೆಲಸ ಇನ್ನೇನು ಶುರುವಾಗಲಿದೆ. ಬ್ಯಾಕ್ ಟು ಬ್ಯಾಕ್ ಒಂದೇ ಜಾನರ್ ಕಥೆ ಬೇಡ ಎಂದು ಕೇಳಿಸಿದ್ದರು ಎಂದು ಹೇಳಿದ್ದಾರೆ.
ಈ ಕಥೆಯನ್ನು ನಟ ರಮೇಶ್ ಅರವಿಂದ್, ನಟ ಶರಣ್ ಅವರೊಂದಿಗೆ ಚರ್ಚೆ ಮಾಡಿದ್ದೇವು. ಇಬ್ಬರು ಸ್ಟಾರ್ ಗಳನ್ನು ಇಟ್ಟುಕೊಂಡು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡುವುದು ಗುರು ದೇಶಪಾಂಡೆ ಅವರ ಕನಸಾಗಿತ್ತು. ಒಬ್ಬರು ಮಗುವಿನ ತಂದೆಯಾಗಿ, ಒಬ್ಬರು ಲಾಯರ್ ಆಗಿ ಪಾತ್ರ ನಿರ್ವಹಿಸಬೇಕಿತ್ತು. ಇದರಿಂದ ತಡವಾಯಿತು. ಅಷ್ಟರಲ್ಲಿ ಅವರು ರಾಮರಸ ಸಿನಿಮಾ ಪ್ರೊಡಕ್ಷನ್ ಶುರು ಮಾಡಿದರು. ನಾನು ಬೇರೆ ಕೆಲಸಗಳಲ್ಲಿ ತೊಡಗಿದೆ.
ಕಳೆದ ಬುಧವಾರ ಲವ್ ಮಾಕ್ಟೇಲ್-3 ಸಿನಿಮಾ ನೋಡಿದ ಗುರು ದೇಶಪಾಂಡೆ ಅವರು ನನಗೆ ಕರೆ ಮಾಡಿದರು. ನಾನು ಕೂಡ ಸಿನಿಮಾ ನೋಡಿದೆ. ಆಶ್ಚರ್ಯವೆಂದರೆ ಸಿನಿಮಾ ಇಡೀ ದ್ವಿತೀಯಾರ್ಧ ನಮ್ಮ ಕಥಾ ಹಂದವರನ್ನು ಹೊಂದಿದೆ. ಹೆತ್ತವರು, ಸಾಕು ತಂದೆ ನಡೆವೆ ನಡೆಯುವ ಕಾನೂನು ಹೋರಾಟ, ಕೋರ್ಟ್ ರೂಮ್, ಕ್ಲೈಮ್ಯಾಕ್ಸ್ ನಲ್ಲಿ ಕೋರ್ಟ್ ನೀಡುವ ತೀರ್ಪು ಎಲ್ಲವೂ ಬರೆದ ಕಥೆಯಂತೆಯೇ ಇದೆ. ಬೇರೆಯವರ ಕಲ್ಪನೆಗೆ ಕನ್ನ ಹಾಕುವುದು ನನಗಷ್ಟೆ ಅಲ್ಲ. ಇಡೀ ಬರಹಗಾರರ ಸಮೂಹಕ್ಕೆ ಮಾಡುವ ದ್ರೋಹವಾಗಿದೆ ಎಂದು ರಾಘವೇಂದ್ರ ನಾಯ್ಕ್ ಪೋಸ್ಟ್ ಮಾಡಿದ್ದಾರೆ.




