ಪ್ರಜಾಸ್ತ್ರ ಸುದ್ದಿ
ತಿರುವನಂತಪುರಂ(Thiruvananthapuram): ಪ್ರೇಯಸಿ ಹಾಗೂ ಸಂಬಂಧಿಕರು ಸೇರಿದಂತೆ ಐವರನ್ನು ಹತ್ಯೆ ಮಾಡಿದ ಘಟನೆ ಕೇರಳದ ವೆಂಜರಮೂಡಿನಲ್ಲಿ(venjaramoodu) ನಡೆದಿದ್ದು, ಇಡೀ ರಾಜ್ಯವೇ ಬೆಚ್ಚಿಬಿದ್ದಿದೆ. ಕೊಲೆ ಮಾಡಿದ ಬಳಿಕ ಹಂತಕ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಗೆ ಕಾರಣ ಏನೆಂದು ಆರಂಭದಲ್ಲಿ ಈತ ಹೇಳಿರಲಿಲ್ಲ. ನನಗೆ ಏನೂ ಗೊತ್ತಿಲ್ಲ ಎನ್ನುತ್ತಿದ್ದನಂತೆ. ಈಗ ಕೊಲೆಗೆ ಕಾರಣ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ.
ಅಫಾನ್ ಎನ್ನುವ 23 ವರ್ಷದ ಯುವಕ ಮೂರು ಬೇರೆ ಬೇರೆ ಮನೆಗಳಲ್ಲಿದ್ದ ಐವರನ್ನು ಹತ್ಯೆ ಮಾಡಿದ್ದಾನೆ. ಪ್ರೇಯಸಿ, ಅಜ್ಜಿ, ಸಹೋದರ, ಚಿಕ್ಕಪ್ಪ, ಚಿಕ್ಕಮ್ಮಳನ್ನು ಹತ್ಯೆ ಮಾಡಿದ್ದಾನೆ. ತಾಯಿಯ ಮೇಲೂ ಗಂಭೀರವಾಗಿ ಹಲ್ಲೆ ಮಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಜ್ಜಿ ಸಲ್ಮಾ ಬೇಬಿ(88) ಪಾಂಗೋಡ್ ಮನೆಯಲ್ಲಿದ್ದಾಗ ಕೊಲೆ ಮಾಡಿದ್ದಾನೆ. ಎಸ್.ಎನ್ ಪುರಂನಲ್ಲಿದ್ದ ಚಿಕ್ಕಪ್ಪ ಲತೀಫ್(69), ಚಿಕ್ಕಮ್ಮ ಶಾಹೀದಾ(59), ಪೆರುಮಾಳದಲ್ಲಿ ಸಹೋದರ ಅಪ್ಸನ್(13) ಹಾಗೂ ಪ್ರೇಯಸಿ ಫರ್ಸನಾಳನ್ನು ಹತ್ಯೆ ಮಾಡಿದ್ದಾನೆ. ಇವನ ತಾಯಿ ಶಮೀನಾ ಹಲ್ಲೆಗೊಳಗಾಗಿದ್ದಾರೆ.
ತಂದೆಯೊಂದಿಗೆ ವಿಸಿಟಿಂಗ್ ವೀಸಾದಲ್ಲಿ ತಂದೆಯೊಂದಿಗೆ ಇದ್ದವನು ಇತ್ತೀಚೆಗೆ ಕೇರಳಕ್ಕೆ ಬಂದಿದ್ದನಂತೆ. ಸಾಕಷ್ಟು ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಅಫಾನ್, ಸಂಬಂಧಿಕರ ಬಳಿಯಲ್ಲ ಕೇಳಿದ್ದನಂತೆ. ಆದರೆ, ಯಾರೂ ನೆರವಿಗೆ ಬಂದಿಲ್ಲ. ಇದರಿಂದ ಕೋಪಗೊಂಡ ಈ ರೀತಿ ಮಾಡಿದ್ದು, ಕೃತ್ಯ ನಡೆಸಿದ ಸಂದರ್ಭದಲ್ಲಿ ಡ್ರಗ್ಸ್ ಸೇವನೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ. ಈ ಕುರಿತು ಎಲ್ಲ ಕೋನಗಳಿಂದ ಪೊಲೀಸರು ತನಿಖೆ ನಡೆಸಿದ್ದಾರೆ.