ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ(Shivamogga): ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಯನ್ನು ಕಾಲುವಗೆ ತಳ್ಳಿ ಕೊಲೆ ಮಾಡಿದ ಘಟನೆ ಭದ್ರಾವತಿ ತಾಲೂಕಿನ ಯಕ್ಕುಂದ ಗ್ರಾಮದ ಹತ್ತಿರ ನಡೆದಿದೆ. ಭದ್ರಾವತಿ ಮೂಲದ ಸ್ವಾತಿ ಕೊಲೆಯಾದ ಯುವತಿಯಾಗಿದ್ದಾಳೆ. ಸೂರ್ಯ ಕೊಲೆ ಆರೋಪಿಯಾಗಿದ್ದಾನೆ. ಇತನ ವಿರುದ್ಧ ಇವನ ತಂದೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಸ್ವಾತಿ ಹಾಗೂ ಸೂರ್ಯ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ವಿಚಾರವಾಗಿ ಸೂರ್ಯ ಪದೆಪದೆ ಜಗಳವಾಡುತ್ತಿದ್ದ. ಪದವಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ಸ್ವಾತಿ ಓದು ಮುಗಿದ ಮೇಲೆ ಮದುವೆ ಮಾಡಿಕೊಳ್ಳೋಣ ಎಂದಿದ್ದಳಂತೆ. ಇದೆ ವಿಚಾರಕ್ಕೆ ಸೆಪ್ಟೆಂಬರ್ 21ರಂದು ಜಗಳವಾಗಿದೆ. ಇದರಿಂದ ಸಿಟ್ಟಾದ ಸೂರ್ಯ, ಸ್ವಾತಿಯನ್ನು ಪುಸಲಾಯಿಸಿಕೊಂಡು ಭದ್ರಾವತಿ ಕಾಲುವೆ ಬಳಿ ಕರೆದುಕೊಂಡು ಬಂದಿದ್ದಾನೆ. ಬಳಿಕ ಆಕೆಯನ್ನು ಕಾಲುವೆಗೆ ತಳ್ಳಿದ್ದಾನೆ.
ಮಂಗಳವಾರ ಸಂಜೆ ಯುವತಿಯ ಮೃತದೇಹ ಪತ್ತೆಯಾಗಿದೆ. ಭದ್ರವಾತಿ ಪೊಲೀಸ್ ಠಾಣೆಯಲ್ಲಿ ಸ್ವಾತಿ ಪೋಷಕರು ದೂರು ನೀಡಿದ್ದಾರೆ. ಸೂರ್ಯ ಎ1 ಹಾಗೂ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಆತನ ತಂದೆ ಸ್ವಾಮಿ ಎ2 ಆರೋಪಿಯಾಗಿದ್ದಾರೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.