ಪ್ರಜಾಸ್ತ್ರ ಸುದ್ದಿ
ಲಖನೌ(Lucknow): ಉತ್ತರ ಪ್ರದೇಶದ ಹತ್ರಾಸ್ ನ(Hathras) ಪದವಿ ಕಾಲೇಜುವೊಂದರ ಪ್ರಾಧ್ಯಾಪಕ ಕಳೆದ ಬರೋಬ್ಬರಿ 20 ವರ್ಷಗಳಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ(Sexual Assault) ನೀಡುತ್ತಿರುವುದು ಬೆಳಕಿಗೆ ಬಂದಿದೆ. ಸುಮಾರು 50ಕ್ಕೂ ಹೆಚ್ಚು ವಿಡಿಯೋಗಳು ಲೀಕ್ ಆಗಿವೆ. ಪ್ರಾಧ್ಯಾಪಕ(Professor) ರಜನೀಶ್ ಕುಮಾರ್ ಎಂಬಾತನ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಇತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣದ ಬಳಿಕ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹತ್ರಾಸ್ ಹಾಗೂ ಲಖನೌ ಜಿಲ್ಲೆಗಳಲ್ಲಿಯೂ ಇದು ಸಂಚಲನ ಮೂಡಿಸಿದೆ. ಈ ಪ್ರಕರಣವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ತಿಳಿಸಿದ್ದಾರಂತೆ. ಆರೋಪಿ ರಜನೀಶ್ ಕುಮಾರ್ ಬಂಧನಕ್ಕೆ ಮೂರು ತಂಡಗಳನ್ನು ರಚನೆ ಮಾಡಲಾಗದೆ ಎಂದು ಹತ್ರಾಸ್ ಪೊಲೀಸ್ ಅಧೀಕ್ಷಕ ಚರಂಜೀವ್ ನಾಥ್ ಸಿನ್ಹಾ ತಿಳಿಸಿದ್ದಾರೆ.