ಪ್ರಜಾಸ್ತ್ರ ಸುದ್ದಿ
ಮದ್ದೂರು(Maddur): ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಮದ್ದೂರಿನಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಇದನ್ನು ಖಂಡಿಸಿ ಸೋಮವಾರ ಭಜರಂಗದಳ, ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನಾ ಮೆರವಣೆ ನಡೆಸಿದವು. ಈ ವೇಳೆ ಲಾಠಿ ಚಾರ್ಜ್ ನಡೆದಿದೆ. ಇದರ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಭಾನುವಾರ ರಾತ್ರಿ ಸುಮಾರು 7 ರಿಂದ 7.10ರ ಸುಮಾರಿನಲ್ಲಿ ರಾಮ ರಹೀಮ ನಗರದ ರಸ್ತೆಯಲ್ಲಿ ಒಂದು ಮಸೀದಿ ಇದೆ. ಅದನ್ನು ದಾಟಿಕೊಂಡು ಹೋಗುವ ಸಂದರ್ಭದಲ್ಲಿ ಕಲ್ಲು ಬಿದ್ದಿದೆಯಂತೆ. ಅಲ್ಲಿಂದ ಶುರುವಾದ ಗಲಾಟೆ ಎರಡು ಕಡೆ ಕಲ್ಲು ತೂರಾಟ ನಡೆದಿದೆ. ಪೊಲೀಸರು ನಿಯಂತ್ರಣ ಮಾಡಿ ಗಣೇಶ ವಿಸರ್ಜನೆ ಮಾಡಲಾಗಿದೆ. ನಂತರ ಗಲಾಟೆ ನಡೆದಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಒಂದು ಸುಮೋಟೋ ಪ್ರಕರಣ, ಇನ್ನೊಂದು ಗಾಯಗೊಂಡಿರುವ ಅಜಯ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಇದುವರೆಗೂ 21 ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಕೆಲವರು ಇದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮದ್ದೂರು ಗಲಾಟೆಗೆ ಸಂಬಂಧಸಿದಂತೆ ಜೆಡಿಎಸ್, ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಸಿಎಂ, ಗೃಹ ಸಚಿವರು ಕಾರಣ. ಕಲ್ಲು ಹೊಡೆದವರಿಗೆ ಬಿರಿಯಾನಿ, ನ್ಯಾಯ ಕೇಳಿದವರಿಗೆ ಲಾಠಿ ಏಟು ಎಂದು ಹಿಂದೂಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮುಂಜಾನೆವರೆಗೂ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.