Ad imageAd image

ಇಂದಿನಿಂದ 45 ದಿನಗಳ ಕಾಲ ಮಹಾ ಕುಂಭಮೇಳ

Nagesh Talawar
ಇಂದಿನಿಂದ 45 ದಿನಗಳ ಕಾಲ ಮಹಾ ಕುಂಭಮೇಳ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಉತ್ತರ ಪ್ರದೇಶ(Uttara Pradesh): ಇಲ್ಲಿನ ಪ್ರಯಾಗ್ ರಾಜ್ ನಲ್ಲಿ ಜನವರಿ 13ರಿಂದ ಮಹಾ ಕುಂಭಮೇಳೆ ನಡೆಯಲಿದೆ. ಫೆಬ್ರವರಿ 26ರ ತನಕ ಮಹಾ ಕುಂಭಮೇಳ ನಡೆಯಲಿದೆ. ಅಂದರೆ 45 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಇದು 144 ವರ್ಷಗಳಿಗೊಮ್ಮ ಆಚರಿಸಲಾಗುತ್ತಿದೆ. ಹಿಂದೂಗಳ ಧಾರ್ಮಿಕ ನಂಬಿಕೆಗಳಲ್ಲಿ ಇದು ಒಂದಾಗಿದ್ದು, ಉತ್ತರ ಭಾರತ ಭಾಗದಲ್ಲಿಯೇ ಅತಿ ಹೆಚ್ಚಾಗಿ ಇದನ್ನು ಆಚರಿಸುವುದು.

ಜನವರಿ 13 ಪುಷ್ಯ ಹುಣ್ಣಿಮೆ ಮೊದಲ ಪವಿತ್ರ ಸ್ನಾನ, ಜನವರಿ 14 ಮಕರ ಸಂಕ್ರಾಂತಿ 2ನೇ ಪವಿತ್ರ ಸ್ನಾನ. ಜನವರಿ 29 ಅಮವಾಸ್ಯೆ ದಿನ 3ನೇ ಪವಿತ್ರ ಸ್ನಾನ, ಫೆಬ್ರವರಿ 3 ವಸಂತ ಪಂಚಮಿ 4ನೇ ಪುಣ್ಯ ಸ್ನಾನ ಹಾಗೂ ಫೆಬ್ರವರಿ 26 ಮಹಾಶಿವರಾತ್ರಿಯಂದು 5ನೇ ಪುಣ್ಯ ಸ್ನಾನದ ಮೂಲಕ ಮಹಾ ಕುಂಭಮೇಳಕ್ಕೆ ತೆರೆ ಬೀಳಲಿದೆ. ಈ ದಿನಗಳಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಕರ್ಮಗಳು ಕಳೆಯುತ್ತವೆ ಎನ್ನುವುದು ಹಿಂದೂಗಳ ನಂಬಿಕೆ.

6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ, 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ ನಡೆಯುತ್ತಿದೆ. 144 ವರ್ಷಕ್ಕೊಮ್ಮೆ ಮಹಾ ಕುಂಭಮೇಳ ನಡೆಯುತ್ತದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಾತ್ರ ಮಹಾ ಕುಂಭಮೇಳ ನಡೆಯುತ್ತದೆ. ಉಳಿದ ಕುಂಭಮೇಳಗಳು ಹರಿದ್ವಾರ, ಉಜ್ಜಯಿನಿ, ನಾಸಕ್ ನಲ್ಲಿ ಮಾತ್ರ ನಡೆಯುತ್ತವೆ. ಮೂರು ಕುಂಭಮೇಳಗಳು ಪ್ರಯಾಗ್ ರಾಜ್ ನಲ್ಲಿ ಮಾತ್ರ ನಡೆಯುತ್ತವೆ. ದೇವರು ಮತ್ತು ರಾಕ್ಷಸರ ನಡುವೆ ನಡೆದ ಯುದ್ಧದ ಹಿನ್ನಲೆ ಇದರ ಆಚರಣೆ ಹಿಂದೆ ಇದೆ. ಭೂಮಿ ಮೇಲಿನ ಒಂದು ವರ್ಷ ದೇವರಿಗೆ 1 ದಿನಕ್ಕೆ ಸಮ. 12 ವರ್ಷಗಳ ಯುದ್ಧ ಭೂಮಿ ಮೇಲೆ 144 ವರ್ಷಗಳಿಗೆ ಸಮ. ಹೀಗಾಗಿ ಮಹಾ ಕುಂಭಮೇಳ 144 ವರ್ಷಕ್ಕೊಮ್ಮೆ ನಡೆಯುತ್ತದೆ.

WhatsApp Group Join Now
Telegram Group Join Now
Share This Article