ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಷ್ಟ್ರೀಯ ಪ್ರಜಾಪ್ರಭುತ್ವದ ನಿಮಿತ್ತ ರಾಜ್ಯ ಸರ್ಕಾರ ವಸತಿ ನಿಲಯದಲ್ಲಿನ ದಲಿತ ಹೆಣ್ಣು ಮಕ್ಕಳನ್ನು ರಸ್ತೆಗೆ ನಿಲ್ಲಿಸಿ ಮಾನವ ಸರಪಳಿ ನಿರ್ಮಿಸಿದೆ. ಈ ಮೂಲಕ ಮಾನವ ಹಕ್ಕುಗಳ ಹರಣ ಮಾಡಿದೆ. ಪ್ರಜಾಪ್ರಭುತ್ವದ ಬಗ್ಗೆ ಗೌರವ ಇದ್ದಿದ್ದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದುಕೊಂಡು ಹೋಗಬೇಕಿತ್ತು ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ(chalavadi narayanaswamy) ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇವರ ಈ ಹೇಳಿಕೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವೆ ಹೆಚ್.ಸಿ(HC Mahadevappa) ಮಹಾದೇವಪ್ಪ ಪ್ರತಿಕ್ರಿಯೆ ನೀಡಿ, ಬಾಬಾ ಸಾಹೇಬರ ಸಂವಿಧಾನದ ಕಾರಣದಿಂದಾಗಿಯೇ ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಆಯ್ಕೆಯಾದ ಛಲವಾದಿ ನಾರಾಯಣಸ್ವಾಮಿ ಅವರು ಚಡ್ಡಿ ಹೊರುವ ತಮ್ಮ ಮಾನಸಿಕ ಗುಲಾಮಗಿರಿ ಬಿಡದೆ ಇರುವುದು ಇಂತಹ ಅಪ್ರಬುದ್ಧವಾದ ಹೇಳಿಕೆಗೆ ಕಾರಣ. ಮಕ್ಕಳು ನಿಂತಿದ್ದು ಅಂತಾರಾಷ್ಟ್ರೀಯ(International Democracy Day) ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸಮಾನತೆ ಸಂದೇಶ ಸಾರುವುದಕ್ಕಾಗಿಯೇ ಹೊರತು ನಿಮ್ಮಂತೆ ಆರ್ ಎಸ್ಎಸ್ ಚಡ್ಡಿ ಹೊರಲು ಅಲ್ಲ ಎಂದು ತಿರುಗೇಟು ನೀಡಿದ್ದಾರೆ.