Ad imageAd image

ಮಹಾಕುಂಭ ಮೇಳ ಕಾಲ್ತುಳಿತ ಪ್ರಕರಣ: ಬೆಳಗಾವಿಯ ನಾಲ್ವರ ಸಾವು

Nagesh Talawar
ಮಹಾಕುಂಭ ಮೇಳ ಕಾಲ್ತುಳಿತ ಪ್ರಕರಣ: ಬೆಳಗಾವಿಯ ನಾಲ್ವರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಳಗಾವಿ(Belagavi): ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ 17 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಅವರ ಮೃತದೇಹಗಳನ್ನು ತರುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ಶೆಟ್ಟಿಗಲ್ಲಿಯ ಅರುಣ್ ಕೋಪರ್ಡೆ, ವಡಗಾವಿಯ ಜ್ಯೋತಿ ಹತ್ತರಾವಠ, ಇವರ ಮಗಳು ಮೇಘಾ, ಶಿವಾಜಿನಗರದ ಮಹಾದೇವಿ ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article