ಪ್ರಜಾಸ್ತ್ರ ಸುದ್ದಿ
ಕೊಚ್ಚಿ: ಮಾಜಿ ಪತ್ನಿ ನೀಡಿದ ದೂರಿನ ಮೇರೆಗೆ ಮಲಯಾಳಂ ನಟ ಬಾಲಾ(Actor Bala) ಅವರನ್ನು ಕಡವಂತರಾ ಠಾಣೆ ಪೊಲೀಸರು ಇಂದು ಮುಂಜಾನೆ ಬಂಧಿಸಿದ್ದಾರೆ. ನಟನೊಂದಿಗೆ ಮ್ಯಾನೇಜರ್ ರಾಜೇಶ್ ಹಾಗೂ ಅನಂತಕೃಷ್ಣನ್ ಎಂಬುವರನ್ನು ಬಂಧಿಸಲಾಗಿದೆ. ಕೊಚ್ಚಿಯಲ್ಲಿರುವ ಮನೆಯಿಂದ ನಟನನ್ನು ಬಂಧಿಸಲಾಗಿದೆ. ಬಾಲಾ ಮಾಜಿ ಪತ್ನಿ ಅಮೃತಾ ಸುರೇಶ್ ಪೊಲೀಸರಿಗೆ ದೌರ್ಜನ್ಯದ ದೂರ ದಾಖಲಿಸಿದ್ದಾರೆ.
ಪತ್ನಿಯನ್ನು ನಿಂದಿಸಿದ್ದಾರೆ. ದೌರ್ಜನ್ಯ(Assault Case)ವೆಸಗಿದ್ದಾರೆ. ಕೌಟುಂಬಕ ಕಲಹ ನಡೆದಿದೆ. ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿರುವುದನ್ನು ನಾನು ನೋಡಿದ್ದೇನೆ ಎಂದು ನಟ ಬಾಲಾ ಮಾಜಿ ಡ್ರೈವರ್ ಆರೋಪ ಮಾಡಿದ್ದಾನೆ. ಐಪಿಸಿ 354ರ ಕಾಯ್ದೆ ಅಡಿ ಹಾಗೂ ಇತರೆ ಕೆಲ ಆರೋಪಗಳ ಅಡಿಯಲ್ಲಿ ಕೋರ್ಟ್ ಗೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.




