ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮಂಗಳವಾರ ಸಂಸತ್ ಕಲಾಪದಲ್ಲಿ ಕಾಂಗ್ರೆಸ್ ಹಿರಿಯ ಸಂಸದ ಮಲ್ಲಿಕಾರ್ಜುನ್ ಖರ್ಗೆ ಬಳಸಿದ ಪದ ಅಸಂಸದೀಯವಾಗಿದೆ. ಅವರು ಕ್ಷಮೆ ಕೇಳಬೇಕು ಎಂದು ಆಡಳಿತರೂಢ ಪಕ್ಷದ ಸದಸ್ಯರು ಒತ್ತಾಯಿಸಿದರು. ಈ ವೇಳೆ ಸಾಕಷ್ಟು ಕೋಲಾಹಲಕ್ಕೂ ಕಾರಣವಾಯಿತು. ನಾನು ಬಳಸಿದ ಪದ ಪೀಠದ ವಿರುದ್ಧವಲ್ಲ. ಸರ್ಕಾರದ ವಿರುದ್ಧ. ಸರ್ಕಾರದ ನೀತಿ ವಿರುದ್ಧ ಮಾತನಾಡಿದ್ದೇನೆ. ನನ್ನ ಹೇಳಿಕೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ನನ್ನ ಹೇಳಿಕೆ ಹಿಂದಕ್ಕೆ ಪಡೆಯುವೆ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಎನ್ ಇಪಿ ಕುರಿತು ಚರ್ಚೆ ನಡೆಯುತಿತ್ತು. ತಮಿಳುನಾಡು ಸರ್ಕಾರದ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ವಿಪಕ್ಷಗಳು ಆಗ್ರಹಿಸಲು ಸಜ್ಜಾಗಿದ್ದವು. ಇದರ ನಡುವೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಲು ಶುರು ಮಾಡಿದರು. ನಿಮಗೆ ಬೆಳಗ್ಗೆ ಅವಕಾಶ ನೀಡಲಾಗಿದೆ ಎಂದು ಸ್ಪೀಕರ್ ಹರಿವಂಶ್ ಸಿಂಗ್ ಹೇಳಿದರು. ನಾನು ಮುಂಜಾನೆ ಮಾತನಾಡುವ ಶಿಕ್ಷಣ ಸಚಿವರು ಇರಲಿಲ್ಲ. ಮಾತನಾಡಲು ಅವಕಾಶ ಕೊಡದೆ ಇರುವುದು ಸರ್ವಾಧಿಕಾರಿ ನಡೆ. ವಿಪಕ್ಷಗಳು ಸರ್ಕಾರಕ್ಕೆ ಏಟು ಕೊಡಲು ಸಿದ್ಧವಾಗಿವೆ ಎಂದರು. ಇದು ಅಸಂಸದೀಯ ಪದವೆಂದು ಬಿಜೆಪಿ ಸಂಸದ ಜೆ.ಪಿ ನಡ್ಡಾ ಹೇಳಿ ಕ್ಷಮೆಗೆ ಆಗ್ರಹಿಸಿದರು.