ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಕಂಪ್ಯೂಟರ್ ಸೇಲ್ಸ್ ಹಾಗೂ ಸರ್ವಿಸ್ ಉದ್ಯಮ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಜಮಖಂಡಿ ಮೂಲದ ಸುಜಿತ್ ಗುಳ್ಳಾದ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೆಂದು ತಿಳಿದು ಬಂದಿದೆ. ಸಾಲಗಾರರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಡೆತ್(Death Note) ನೋಟ್ ಸಹ ಸಿಕ್ಕಿದೆಯಂತೆ.
ಉದ್ಯಮದ ಸಲುವಾಗಿ ಹಲವಾರು ಜನರ ಬಳಿ ಸಾಲ ಪಡೆದಿದ್ದ. ಕೆಲವರು ಕಡೆ ವಾರದ ಬಡ್ಡಿಗೂ ಸಾಲ ಪಡೆದಿದ್ದ. ಆದರೆ, ಅದನ್ನು ತೀರಿಸಲಾಗಿದೆ ಸಾಕಷ್ಟು ಹಿಂಸೆ ಅನುಭವಿಸಿದ್ದಾರೆ. ಇದರಿಂದ ಹೊರ ಬರಲು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಬೆಂಗೇರಿಯ ಚೇತನಾ ಕಾಲೋನಿಯಲ್ಲಿರುವ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಎಸ್ಪಿ ಎನ್.ಶಶಿಕುಮಾರ್ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.