ಪ್ರಜಾಸ್ತ್ರ ಸುದ್ದಿ
ಇಂಪಾಲ್(Impal): ನವೆಂಬರ್ 11ರಂದು ಮಣಿಪುರದ(Manipur) ಜಿರೀಬಾಮ್ ಜಿಲ್ಲೆಯಲ್ಲಿ ಮೈತೇಯಿ ಸಮುದಾಯದ ಒಂದೇ ಕುಟುಂಬದ ಮೂವರು ಮಹಿಳೆಯರು, ಎರಡೂವರೆ ತಿಂಗಳ 2 ಶಿಶುಗಳು ಹಾಗೂ 8 ತಿಂಗಳ ಕೂಸಿನ ಮೃತದೇಹಗಳು ಪತ್ತೆಯಾದ ಹಿನ್ನಲೆಯಲ್ಲಿ, ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಅದು ಹಿಂಸಾಸ್ವರೂಪ(Violence) ಪಡೆದುಕೊಂಡಿದೆ. ಮನೆ, ವಾಹನಗಳಿಗೆ ಬೆಂಕಿ ಹಚ್ಚಿದ, ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಂಘರ್ಷದ ಗೂಡಾಗಿರುವ ಮಣಿಪುರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂಟರ್ ನೆಟ್ ಸೇವೆ ಬಂದ್ ಮಾಡಲಾಗಿದೆ. ಇದರ ನಡುವೆ ಇಂಪಾಲ್ ದಲ್ಲಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್(Biren Singh) ಅವರ ಖಾಸಗಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಸಚಿವರು, ಶಾಸಕರ ಮನೆಗಳನ್ನು ಸಹ ಗುರಿಯಾಗಿಸಲಾಗಿದೆ. ಬಿಜೆಪಿ ಆಡಳಿತದಲ್ಲಿ ಕುಕಿ ದಂಗೆಕೋರರಿಂದ ಮೈತೇಯಿ(Kuki and Meitei) ಸಮುದಾಯದ ಹೆಣ್ಮಕ್ಕಳ, ಮಕ್ಕಳ ಹತ್ಯೆಗಳು ನಡೆಯುತ್ತಿವೆ ಎಂದು ಪ್ರತಿಭಟನೆಕಾರರು ವಾಗ್ದಾಳಿ ನಡೆಸುತ್ತಿದ್ದಾರೆ.