ಪ್ರಜಾಸ್ತ್ರ ಸುದ್ದಿ
ಇಂಪಾಲ್(Impal): ಡ್ರೋನ್ ದಾಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರ ಹಾಗೂ ಡಿಜಿಪಿಯನ್ನು ಹುದ್ದೆಯಿಂದ ತಗೆಯಬೇಕೆಂದು ವಿದ್ಯಾರ್ಥಿಗಳು, ಮಹಿಳೆಯರು ಪ್ರತಿಭಟನೆ ನಡೆಸಿದ್ದು, ರಾಜಭವನ ಮುತ್ತಿಗೆಗೆ ಯತ್ನಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸಲಾಯಿತು. ಈ ವೇಳೆ ಅಶ್ರುವಾಯು(Tear Gas) ಸಿಡಿಸಲಾಗಿದೆ. ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಜಮಾಯಿಸಿ ರಾಜಭವನದತ್ತ ಹೊರಟಿದ್ದರು. ಪೊಲೀಸರು ಅವರ ಮೇಲೆ ಅಶ್ರುವಾಯು ಪ್ರಯೋಗಿಸಿದ್ದಾರೆ. ಹೀಗಾಗಿ ಹಿಂಸಾರೂಪ(Violence) ಪಡೆದುಕೊಂಡಿದೆ.
ಮಣಿಪುರ ಸರ್ಕಾರ ಇಂಪಾಲ್ ಪೂರ್ವ ಹಾಗೂ ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಿದೆ. ಥೌಬಲ್ ನಲ್ಲಿ ಬಿಎನ್ಎಸ್ಎಸ್ ಕಾಯ್ದೆ 163(2)ರ ಅಡಿಯಲ್ಲಿ ನಿಷೇಧಾಜ್ಞೆ(Curfew) ಹೇರಲಾಗಿದೆ. ಸೆಪ್ಟೆಂಬರ್ 10 ಮಧ್ಯಾಹ್ನ 3 ಗಂಟೆಯಿಂದ ಸೆಪ್ಟೆಂಬರ್ 15ರ 3 ಗಂಟೆಯ ತನಕ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ. ಮಣಿಪುರ ಪ್ರಾದೇಶಿಕ ವ್ಯಾಪ್ತಿಯಲ್ಲಿ ಬರುವ ಇಂಟರ್ ನೆಟ್(Internet), ಮೊಬೈಲ್(Mobile Data) ಡೇಟಾ ಐದು ದಿನಗಳ ನಿಷೇಧಿಸಲಾಗಿದೆ. ಈ ಮೂಲಕ ದ್ವೇಷ ಭಾಷಣದ ವಿಡಿಯೋ, ಭಾಷಣ ಪ್ರಸಾರ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ.