ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಮರಾಠಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟ ಜೋರಾಗಿದೆ. ಇಲ್ಲಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಹತ್ತಿರ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಮನೋಜ್ ಜರಾಂಗೆ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ನಮಗೆ ಮೀಸಲಾತಿ ಸಿಗುವ ತನಕ ನಾವು ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳುತ್ತಿದ್ದಾರೆ.
ರೈತ ಮುಖಂಡ ಮಾರುತಿ ಪಾಟೀಲ ಮಾತನಾಡಿ, ನಮಗೆ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಗುಂಡಿಕ್ಕಿ ಹತ್ಯೆ ಮಾಡಲಿ. ಯಾಕಂದ್ರೆ, ನಮ್ಮ ಜೀವನ ಎಷ್ಟೊಂದು ಕಷ್ಟದಲ್ಲಿದೆ ಅನ್ನೋದು ನಮಗೆ ಗೊತ್ತು. ಒಬಿಸಿ ಕೆಟಗೆರಿಯಲ್ಲಿ ಮರಾಠರಿಗೆ ಶೇಕಡ 10ರಷ್ಟು ಮೀಸಲಾತಿ ನೀಡಬೇಕು ಎಂದು ಈ ಹೋರಾಟ ನಡೆಸಲಾಗುತ್ತಿದೆ. ಮನೋಜ್ ಜರಾಂಗೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ.