ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಧ್ರುವ್ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ವಿರುದ್ಧ ಸ್ವತಃ ನಿರ್ದೇಶಕ ಎ.ಪಿ ಅರ್ಜುನ್ ಕೋರ್ಟ್ ಮೆಟ್ಟಿಲು ಏರಿದ್ದಾರೆ. ಸಿನಿಮಾ ಆರಂಭದಲ್ಲಿಯೇ ಒಂದಿಷ್ಟು ಹೊಂದಾಣಿಕೆ ಸಮಸ್ಯೆ ಕಾಡುತ್ತಿತ್ತು. ಚಿತ್ರದ ಪ್ರಚಾರದ ಸಂದರ್ಭದಲ್ಲಿಯೂ ನಟ ಧ್ರುವ್(Dhruva Sarja) ಸರ್ಜಾ, ನಿರ್ದೇಶಕ ಎ.ಪಿ(A.P Arjun) ಅರ್ಜುನ್ ಹಾಗೂ ನಿರ್ಮಾಪಕರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ತೋರಿಸಿತು. ಆದರೆ, ಸ್ವತಃ ನಿರ್ದೇಶಕರು ತಾವು ಆಕ್ಷನ್ ಕಟ್ ಹೇಳಿದ ಚಿತ್ರ ಬಿಡುಗಡೆಯಾಗಬಾರದೆಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಮಾರ್ಟಿನ್(Martin Kannada Movie) ಸಿನಿಮಾ ನಿರ್ದೇಶನ ಮಾಡಿದ್ದು ನಾನು. ನನ್ನ ಹೆಸರನ್ನು ಕೈ ಬಿಟ್ಟು ಪ್ರಚಾರ ಮಾಡುತ್ತಿದ್ದಾರೆ. ಸಿನಿಮಾ ಒಪ್ಪಂದ ನಿಯಮಗಳನ್ನು ನಿರ್ಮಾಪಕರು ಪಾಲಿಸಿಲ್ಲವೆಂದು ಆರೋಪಿಸಿದ್ದಾರೆ. ನನ್ನ ಹೆಸರು ಕೈಬಿಟ್ಟು ಮೂವಿ ರಿಲೀಸ್ ಮಾಡಬಾರದು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 11 ಸಿನಿಮಾ ತೆರೆಗೆ ಬರಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಉದಯ ಮೆಹ್ತಾ ಅವರು ಮಾರ್ಟಿನ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ನಟ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ. ವೈಭವಿ ಶಾಂಡಿಲ್ಯ ಧ್ರುವ್ ಸರ್ಜಾಗೆ ಜೋಡಯಾಗಿದ್ದಾರೆ. ಆದರೆ, ಮುಸುಕಿನ ಗುದ್ದಾಟ ನ್ಯಾಯಾಲಯದ ಅಂಗಳಕ್ಕೆ ಬಂದಿದ್ದು, ಮುಂದಿನ ಕಥೆ ಏನು ಅನ್ನೋ ಕುತೂಹಲ ಮೂಡಿದೆ.