Ad imageAd image

ನೇಪಾಳದಲ್ಲಿ 53 ಜನರ ಪ್ರಾಣ ತೆಗೆದ ಭಾರೀ ಭೂಕಂಪನ

Nagesh Talawar
ನೇಪಾಳದಲ್ಲಿ 53 ಜನರ ಪ್ರಾಣ ತೆಗೆದ ಭಾರೀ ಭೂಕಂಪನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕಠ್ಮಂಡು(Kathmandu): ನೇಪಾಳದ ಟಿಬೆಟ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಪ್ರಬುಲ ಭೂಕಂಪನವಾಗಿದೆ. ಇದರಿಂದಾಗಿ 53 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಠ್ಮಂಡು ಹಾಗೂ ಭಾರತದ ಉತ್ತರ ಭಾಗದಲ್ಲಿಯೂ ಇದರಿಂದ ಸಾಕಷ್ಟು ಹಾನಿಯಾಗಿದೆ. 7.1 ತೀವ್ರತೆಯ ಭೂಕಂಪನವಾಗಿದೆ. ಹೀಗಾಗಿ ಹಲವಾರು ಕಟ್ಟಡಗಳು ಧರೆಗುರುಳಿವೆ. ಇದರ ಪರಿಣಾಮ ಭಾರತದ ಬಿಹಾರದಲ್ಲಿಯೂ ಭೂಮಿ ನಡುಗಿದ ಅನುಭವ ಇಲ್ಲಿನ ಜನರಿಗೆ ಆಗಿದೆ.

ಇದು ಕಳೆದ ಐದು ವರ್ಷಗಳಲ್ಲಿ ಭಾರಿ ಶಕ್ತಿಶಾಲಿ ಕಂಪನವಾಗಿದೆ. ಮುಂಜಾನೆ 6.35ರಿಂದಲೇ ಭೂಕಂಪನ ಸಂಭವಿಸಿದೆ. ಒಂದು ಗಂಟೆಯ ಅವಧಿಯಲ್ಲೇ 6 ಬಾರಿ ಭೂಕಪಂನವಾಗಿದೆ ಎಂದು ವರದಿಯಾಗಿದೆ. 53 ಜನರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿಯಲ್ಲಿ ಹಲವರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

WhatsApp Group Join Now
Telegram Group Join Now
Share This Article