ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): 35 ಅಡಿ ಎತ್ತರದ ಶಿವಾಜಿ(Shivaji Maharaj statue) ಮಹಾರಾಜರ ಪ್ರತಿಮೆ ಸ್ಥಾಪಿಸಿ 8 ತಿಂಗಳಲ್ಲೇ ಕುಸಿದ ಪ್ರಕರಣ ಸಂಬಂಧ ಭಾನುವಾರ ಮಹಾ ವಿಕಾಸ್ ಅಘಾಡಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ದಕ್ಷಿಣ ಮುಂಬೈನ ಹುತಾತ್ಮ ಚೌಕ್ ನಿಂದ ಗೇಟ್ ವೇ ಆಫ್ ಇಂಡಿಯಾ ತನಕ ಬೃಹತ್ ಪ್ರತಿಭಟನೆ(Protest) ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.
ಶಿವಸೇನೆ(ಯುಬಿಟಿ)(Shiv sene) ನಾಯಕ ಉದ್ಧವ್ ಠಾಕ್ರೆ, ಎನ್ ಸಿಪಿ(NCP) ನಾಯಕ ಶರದ್ ಪವಾರ್, ರಾಜೇಶ್ ಟೋಪೆ, ಕಾಂಗ್ರೆಸ್(Congress) ನಾಯಕ ನಾನಾ ಪಟೋಲೆ ಸೇರಿದಂತೆ ಅನೇಕ ನಾಯಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿರುವುದಕ್ಕೆ ಇದೆಲ್ಲವೂ ಸಾಕ್ಷಿ ಎಂದು ವಾಗ್ದಾಳಿ ನಡೆಸಲಾಯಿತು.