ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ತಕ್ಷಣ ಸರ್ಕಾರದಲ್ಲಿ ಖಾಲಿಯಿರುವ ಉದ್ಯೋಗಗಳನ್ನ ಭರ್ತಿ ಮಾಡಬೇಕು, ಉದ್ಯೋಗದ ವಯೋಮಿತಿಯನ್ನ ಜಾಸ್ತಿ ಮಾಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಘಟಕದಿಂದ ಬ್ರಹತ್ ಪ್ರಮಾಣದ ಯುವನನಾಕ್ರೋಶ ಹೋರಾಟ ನಡೆಸಲಾಯಿತು. ಈ ಹೋರಾಟದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹಿಚ್ಚು ವಿದ್ಯಾರ್ಥಿಗಳು ಸೇರಿ ನಗರದ ಅಂಬೇಡ್ಕರ್ ವೃತ್ತದವರೆಗೆ ರ್ಯಾಲಿ ಮೂಲಕ ಜಾತಾ ನಡೆಸಿದರು.
ಡಿವಿಪಿ ಸಂಘಟನೆಯ ರಾಜ್ಯಧ್ಯಕ್ಷರಾದ ಶ್ರೀನಾಥ ಪೂಜಾರಿ ಮಾತನಾಡಿ, ನಾಡಿನಾದ್ಯಂತ ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಆಗಿರಬಹುದು ಇವತ್ತಿನ ಕಾಂಗ್ರೆಸ್ ಸರ್ಕಾರ ಆಗಿರಬಹುದು ನಾಲ್ಕು ವರ್ಷದಿಂದ ಯಾವುದೇ ಸರ್ಕಾರಿ ಹುದ್ದೆಗಳನ್ನು ತುಂಬದೇ ಸತಾಯಿಸುತ್ತಿರುವುದು ಖಂಡನೀಯ ಎಂದರು. ಯುವ ಜನರು ನೌಕ್ರಿ ಪಡೆಯಬೇಕೆನ್ನುವ ಉದ್ದೇಶದಿಂದ ಹಗಲು ರಾತ್ರಿ ಕಷ್ಟಪಟ್ಟು ಶ್ರಮ ಪಡ್ತಾಯಿದ್ದಾರೆ. ಆದರೆ ಸರ್ಕಾರ ಅವರ ಕಷ್ಟಕ್ಕೆ ಪ್ರತಿಫಲವಾಗಿ ಉದ್ಯೋಗ ನೀಡದೆ ಅವರ ಜೀವನವನ್ನು ಹಾಳು ಮಾಡುತ್ತಿರುವುದು ಅತಿ ನೋವಿನ ಸಂಗತಿ ಎಂದರು.
ಡಿವಿಪಿ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, ದಲಿತ ವಿದ್ಯಾರ್ಥಿ ಪರಿಷತ್ ನಿರುದ್ಯೋಗಿ ಯುವಕರ ಪರವಾಗಿ ಎರಡು ವರ್ಷದಿಂದ ಹೋರಾಟ ಮಾಡುತ್ತಾ ಬಂದಿದೆ. ಆದರೆ ನಮ್ಮನ್ನಾಳುವ ಸರ್ಕಾರಗಳು ನಮ್ಮ ಕಷ್ಟಗಳನ್ನ ಅರ್ಥಮಾಡಿಕೊಳ್ಳದೆ ಇವತ್ತು ಬೀದಿಯಲ್ಲಿ ನಿಲ್ಲಿಸುವ ರೀತಿಯಲ್ಲಿ ನಮ್ಮನ್ನ ನೋಡಿಕೊಳ್ಳುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು ವರ್ಷಗಳಿಂದ ವಿದ್ಯಾರ್ಥಿ ಯುವ ಜನರು ತಮ್ಮ ಊರನ್ನು ಬಿಟ್ಟು ಸಂಬಂಧಿಕರನ್ನು ಬಿಟ್ಟು ತಂದೆ, ತಾಯಿ ಎಲ್ಲರನ್ನೂ ಬಿಟ್ಟು ನಗರಗಳಿಗೆ ಬಂದು ನಾನೇನಾದರೂ ಒಂದು ಸರ್ಕಾರಿ ಹುದ್ದೆಗಳನ್ನು ಪಡೆದು ಸಾಧನೆ ಮಾಡಬೇಕೆನ್ನುವ ಹಂಬಲದಲ್ಲಿರುವ ಉದ್ಯೋಗ ಆಕಾಂಕ್ಷಿಗಳಿಗೆ ಈಗಿನ ಸರ್ಕಾರಗಳು ಉದ್ಯೋಗ ನೀಡದೆ ಸತಾಯಿಸುತ್ತಿರುವುದು ಮತ್ತು ಅವರ ಜೀವನವನ್ನು ನಾಶ ಮಾಡುತ್ತಿರುವುದು ಖಂಡನೀಯ ಎಂದರು.
ಸ್ಪರ್ಧಾ ಆಕಾಂಕ್ಷೆ ವಿದ್ಯಾರ್ಥಿಗಳನ್ನು ಮಾತಾಡುತ್ತಾ ಸರ್ಕಾರವನ್ನು ಒತ್ತಾಯಿಸಿ ರಾಜ್ಯದ ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಇನ್ನೂ ಒಂದು ವಾರದಲ್ಲಿ ನೋಟಿಫಿಕೇಶನ್ ಮಾಡಬೇಕು, ನಾಲ್ಕು ವರ್ಷದಿಂದ ಸರ್ಕಾರಿ ಹುದ್ದೆಯನ್ನು ಭರ್ತಿ ಮಾಡದ ಕಾರಣಕ್ಕಾಗಿ ಎಷ್ಟೋ ವಿದ್ಯಾರ್ಥಿಗಳ ವಯಸ್ಸು ಮೀರಿದೆ ಅಂಥವರಿಗೆ 35 ವರ್ಷದ ತನಕ ವಯೋಮಿತಿಯನ್ನು ಹೆಚ್ಚಿಸಬೇಕು, ಸರ್ಕಾರಿ ಉದ್ಯೋಗದ ಅನುಮೋದನೆಯಯಲ್ಲಿ ಸ್ಪಷ್ಟವಾಗಿ ಸಮಯದ ಸ್ಪಷ್ಟತೆಯನ್ನು ನಿಗದಿಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಮುಖಂಡರಾದ ಹುಚ್ಚಪ್ಪ ಸಿಂದಗಿ, ಮಂಜುನಾಥ, ವಿದ್ಯಾರ್ಥಿ ಪರಿಷತ್ ಉಪಾಧ್ಯಕ್ಷರಾದ ಮಾದೇಶ ಚಲವಾದಿ, ಪ್ರತಾಪ ತೋಳನೂರ, ಪ್ರಶಾಂತ ದಾಂಡೇಕರ, ರಾಹುಲ ಕಳಸದ, ಯಮನೂರಿ ಮಾದರ, ಭೀಮು, ಮಂಜುನಾಥ.ಎಲ್, ಶಿಲ್ಪಾ ಸೇರಿದಂತೆ ಮುಂತಾದವರು ಮತ್ತು ನಾಡಿನ ವಿದ್ಯಾರ್ಥಿ ಯುವಜನರು ಭಾಗಿಯಾಗಿದ್ದರು.