Ad imageAd image

ಜುಲೈ 31ರಂದು 3 ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ

Nagesh Talawar
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಉತ್ತರ ಕರ್ನಾಟಕ ಜಿಲ್ಲೆಗಳ ತಳವಾರ ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ವಿಜಯಪುರ ವತಿಯಿಂದ, ಜುಲೈ 31, 2024ರಂದು ವಿಜಯಪುರದಲ್ಲಿ ದರ್ಬಾರ್ ಹೈಸ್ಕೂಲ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ತನಕ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೋರಾಟ(ವಿಜಯಪುರ, ಕಲಬುರಗಿ, ಯಾದಗಿರಿಯಲ್ಲಿ ಏಕಕಾಲದಲ್ಲಿ ಹೋರಾಟ) ನಡೆಯಲಿದೆ. ಇದರ ಭಾಗವಾಗಿ ಕರಪತ್ರಗಳನ್ನು ವಿತರಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಸಿಂದಗಿ ತಾಲೂಕಿನ ಗೋಲಗೇರಿ(Golageri) ಗ್ರಾಮದಲ್ಲಿ ಕರಪತ್ರಗಳನ್ನು ಹಂಚುವ ಕೆಲಸ ನಡೆಯಿತು.

ಈ ವೇಳೆ ಮಾತನಾಡಿದ ತಳವಾರ ಸಮಾಜದ ಮುಖಂಡರಾದ ಸಿದ್ದಣ್ಣ ಐರೋಡಗಿ, ಕೇಂದ್ರ ಸರ್ಕಾರ ತಳವಾರ ಜಾತಿ ಜನಾಂಗವನ್ನು ಪರಿಶಿಷ್ಠ(ST) ಪಂಗಡ (ಎಸ್ಟಿ) ಪಟ್ಟಿಯಲ್ಲಿ ಸೇರಿಸಿ ಗೆಜೆಟ್ ಅಧಿಸೂಚನೆ ಹೋರಡಿಸಿದರೂ ಕೂಡ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಅರ್ಹ ಎಸ್ಟಿ ಸಮುದಾಯದವರಿಗೆ ಜಾತಿ ಪ್ರಮಾಣಪತ್ರ(Cast Income) ನೀಡಲು ಅಧಿಕಾರಿಗಳು ವಿನಾಃಕಾರಣ ವಿಳಂಬ ಮಾಡುತ್ತಿದ್ದಾರೆ. ಇಲ್ಲಸಲ್ಲದ ಕಾರಣ ಹೇಳಿ ಅರ್ಜಿಗಳನ್ನು ತಿರಸ್ಕಾರ ಮಾಡುತಿದ್ದಾರೆ. ಈ ಧೋರಣೆ ಖಂಡಿಸಿ ತಳವಾರ(Talawar) ಸಮಾಜದ ಹೋರಾಟ ಅನಿವಾರ್ಯ ಮತ್ತು ಅವಶ್ಯಕವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಳವಾರ ಸಮಾಜದ ಹೋರಾಟಗಾರರಾದ ಮಡಿವಾಳ ನಾಯ್ಕೋಡಿ, ವಿಠ್ಠಲ ಯರಗಲ್, ಮಾಣಿಕ ಕಲಬಾ, ಶಿವು ಗುರಿಕಾರ, ರಾಜೇಂದ್ರ ತಳವಾರ, ರಮೇಶ ತಳವಾರ, ಮಾಂತೇಶ ನಾಯ್ಕೋಡಿ, ಪ್ರಕಾಶ ತಳವಾರ, ರಾವುತಪ್ಪ ಮಾಗಣಗೇರಿ, ಗೋಲ್ಲಾಳ ನಾಯ್ಕೋಡಿ, ಸಂಜು ನಾಯ್ಕೋಡಿ, ವಿರೇಶ ನಾಯ್ಕೋಡಿ, ಸಾಯಬಣ್ಣ ನಾಯ್ಕೋಡಿ ಸೇರಿ ಇತರರಿದ್ದರು.

WhatsApp Group Join Now
Telegram Group Join Now
Share This Article