ಪ್ರಜಾಸ್ತ್ರ ಸುದ್ದಿ
ವಿಜಯಪುರ(Vijayapura): ಕರ್ನಾಟಕದ ಅಟಲ್ ಜೀ ಜನಸ್ನೇಹಿ ತಂತ್ರಾಂಶದಲ್ಲಿ ಪರಿಶಿಷ್ಟ ಪಂಗಡ ಪಟ್ಟಿ ಕ್ರಮ ಸಂಖ್ಯೆ 38ರಲ್ಲಿ ಸೇರಿಸಬೇಕಾದ ತಳವಾರ(Talawar) ಜಾತಿಯನ್ನು ಲಾಗಿನ್ ನಲ್ಲಿ ಸಂವಿಧಾನ ಬಾಹಿರವಾಗಿ ನಾಯ್ಕಡ ಪರಿವಾರ ಮತ್ತು ತಳವಾರ, ನಾಯಕ ಪರಿವಾರ ಮತ್ತು ತಳವಾರ, ನಾಯಕ ತಳವಾರ ಅಂತಾ ಮೂರು ರೀತಿಯಲ್ಲಿ ನಮೂದು ಮಾಡಿ ಅನಾವಶ್ಯಕವಾಗಿ ಗೊಂದಲ ಸೃಷ್ಟಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಪ್ರತಿಭಟನೆ ಮಾಡಲಾಯಿತು.
ಭಾರತ ಸರ್ಕಾರದ(India Govt) ಗೆಜೆಟ್ ಪ್ರಕಾರ ಕೇವಲ ಒಂದೇ ತಳವಾರ ಜಾತಿ ನಮೂದು ಮಾಡಿ ಒತ್ತಾಯಿಸಿ ಉತ್ತರ ಕರ್ನಾಟಕ ಜಿಲ್ಲೆಗಳ ತಳವಾರ ಪರಿಶಿಷ್ಟ ಪಂಗಡ ಹಿತರಕ್ಷಣಾ ಸಮಿತಿ ವತಿಯಿಂದ ಬ್ರಹತ್ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಯ ಮೂಲಕ ಪ್ರತಿಭಟನಾ(Protest) ಮೆರವಣಿಗೆ ನಡೆಸಿ ತಮ್ಮ ಹಕ್ಕು ತಮಗೆ ನೀಡಬೇಕು ಎಂದು ಘೋಷಣೆ ಕೂಗಲಾಯಿತು. ನಂತರ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಪ್ರತಿಭಟನೆಯಲ್ಲಿ ಸಿದ್ದಣ್ಣ ಐರೋಡಗಿ, ಸಾಯಬಣ್ಣ ಬಾಗೇವಾಡಿ, ಶಿವು ಗುರಿಕಾರ, ಭಾಗಣ್ಣ ಕೆಂಭಾವಿ, ಮಾಣಿಕ ಕಲಬಾ, ವಿಠ್ಠಲ ಯರಗಲ್, ಮಡಿವಾಳ ನಾಯ್ಕೋಡಿ, ಅರವಿಂದ ನಾಯ್ಕೋಡಿ, ಆಕಾಶ ಬೂದಿಹಾಳ, ಸಂಗಣ್ಣ ಪ್ಯಾಟಿ, ರಾಜೇಂದ್ರ ತಳವಾರ, ಬಸವರಾಜ ತಳವಾರ, ಜಗದೀಶ ಕೋರಳ್ಳಿ, ಪರಶುರಾಮ ಬಿದರಕುಂದಿ, ಜಗು ತಳವಾರ, ಸಿದ್ದು ಯಂಕಂಚಿ, ಅಲೋಕ ರೋಡಗಿ, ಪೀರಪ್ಪ ತಳವಾರ, ಮಾದೇವ ಮಾನೇಗಾರ, ಶರಣಪ್ಪ ಮಾನೇಗಾರ, ಶಿವಪ್ಪ ವಜ್ರದ, ಮಂಜು ವಾಲೀಕಾರ, ದೇವೆಂದ್ರ ಟಕ್ಕಳಕಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.