ಪ್ರಜಾಸ್ತ್ರ ಸುದ್ದಿ
ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಕ್ರಿಸ್ಮಸ್ ಹಬ್ಬದ ದಿನವಾದ ಡಿಸೆಂಬರ್ 25ರಂದು ಎಲ್ಲೆಡೆ ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಿದವರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಎರಡು ವರ್ಷ ಕಾಯ್ದಿರುವುದಕ್ಕೂ ಖುಷಿಯಾಗಿದೆ ಎನ್ನುತ್ತಿದ್ದಾರೆ. ಮುಂಜಾನೆ 6 ಗಂಟೆಯಿಂದಲೇ ಶೋಗಳು ಫುಲ್ ಆಗಿದ್ದು, ಪ್ರತಿಯೊಬ್ಬರು ಸಿನಿಮಾ ಸೂಪರ್ ಎನ್ನುತ್ತಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಮುಂಜಾನೆಯೇ 30 ಶೋಗಳನ್ನು ಕೊಡಲಾಗಿದೆ.
ಮ್ಯಾಕ್ಸ್ ಸಿನಿಮಾ ಪಕ್ಕಾ ಮಾಸ್. ಈ ಹಿಂದೆ ಸುದೀಪ್ ಹೇಳಿದಂತೆ ಇದೊಂದು ಫುಲ್ಲಿ ಮಾಸ್ ಎಂಟರ್ ಟೈನ್ಮೆಂಟ್ ಸಿನಿಮಾ. ಮೆಸೇಜ್ ಕಡಿಮೆ ಎಂದಿದ್ದರು. ಹೀಗಾಗಿ ಮಾಸ್ ಆಡಿಯನ್ಸ್ ಗೆ ಖಂಡಿತ ಇಷ್ಟವಾಗಿದೆ. ವಿಕ್ರಾಂತ್ ರೋಣಾ ಚಿತ್ರದ ಬಳಿಕ ಯಾವುದೇ ಸಿನ್ಮಾ ಬಂದಿರಲಿಲ್ಲ. ಸಧ್ಯ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ. ಉಳಿದ ಭಾಷೆಗಳಲ್ಲಿ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಚಿತ್ರದಲ್ಲಿ ಸುದೀಪಗೆ ಜೋಡಿ ಎಂದೂ ಯಾರೂ ಇಲ್ಲ. ಆದರೂ ನಟಿಯರಾದ ವರಲಕ್ಷ್ಮಿ ಶರತಕುಮಾರ್, ಸಂಯುಕ್ತ ಹೊರನಾಡು, ಸುಕೃತಾ ವಾಗ್ಲೆ ಕಾಣಿಸಿಕೊಂಡಿದ್ದಾರೆ. ಶೇಖರ್ ಚಂದ್ರು ಕ್ಯಾಮೆರಾ ವರ್ಕ್ ಇದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಮೂವರು ಆಕ್ಷನ್ ಡೈರೆಕ್ಟರ್ಸ್ ಇದ್ದಾರೆ. ವಿಜಯ್ ಕಾರ್ತಿಕೇಯ್ ಆಕ್ಷನ್ ಕಟ್ ಹೇಳಿರುವ ಮೂಲಕ ಒಳ್ಳೆಯ ಓಪನಿಂಗ್ ಕಂಡಿದೆ.