ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಐಪಿಎಲ್ ಟೂರ್ನಿಯಿಂದ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಹೊರ ನಡೆದಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಅವರ ಕೈಬೆರಳು ಮುರಿತ. ಇದರಿಂದಾಗಿ ಮುಂದಿನ ಪಂದ್ಯಗಳಲ್ಲಿ ಮ್ಯಾಕ್ಸ್ ವೆಲ್ ಕಣಕ್ಕೆ ಇಳಿಯುತ್ತಿಲ್ಲ. ಟೂರ್ನಿಯಿಂದ ಹೊರ ಬಿದ್ದಿದ್ದಾರೆ ಎಂದು ಪಂಜಾಬ್ ತಂಡದ ಪ್ರಾಂಚೈಸಿ ತಿಳಿಸಿದೆ.
ಕಳೆದ ಬಾರಿ ಆರ್ ಸಿಬಿ ಪರ ಆಡಿದ್ದ ಮ್ಯಾಕ್ಸ್ ವಿಫಲರಾಗಿದ್ದರು. ಹೀಗಾಗಿ ಬೆಂಗಳೂರು ತಂಡ ಇವರನ್ನು ಕೈಬಿಟ್ಟಿತ್ತು. ಈ ಬಾರಿ ನಡೆದ ಹರಾಜಿನಲ್ಲಿ ಪಂಜಾಬ್ ಖರೀದಿಸಿತು. ಈ ಬಾರಿಯೂ ಕಳಪೆ ಆಟವಾಡಿದ್ದಾರೆ. 7 ಪಂದ್ಯಗಳಿಂದ ಕೇವಲ 48 ರನ್ ಗಳಿಸಿದ್ದಾರೆ. 4 ವಿಕೆಟ್ ಪಡೆದಿದ್ದಾರೆ. ಮಳೆಯಿಂದ ಕೋಲ್ಕತ್ತಾ ವಿರುದ್ಧದ ಪಂದ್ಯ ರದ್ದಾಗುವುದಕ್ಕೂ ಮೊದಲು ಮ್ಯಾಕ್ಸ್ ವೆಲ್ ಗಾಯಗೊಂಡಿದ್ದರು. ಪಂಜಾಬ್ ತಂಡ 10 ಪಂದ್ಯಗಳಲ್ಲಿ 6ರಲ್ಲಿ ಗದ್ದು, 1 ರದ್ದಾಗಿದೆ. 3ರಲ್ಲಿ ಸೋತಿದೆ. 13 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.