ಪ್ರಜಾಸ್ತ್ರ ಸುದ್ದಿ
ಲಖನೌ(Lucknow): ಬಹುಜನ ಸಮಾಜವಾದಿ ಪಕ್ಷದ(BSP) ಮುಖ್ಯಸ್ಥೆ, ಮಾಜಿ ಸಿಎಂ ಮಾಯಾವತಿ ಅವರು, ನಾನು ಇರುವ ತನಕ ಯಾರೂ ಉತ್ತಾರಾಧಿಕಾರಿ ಇಲ್ಲ ಎಂದು ಭಾನುವಾರ ತಿಳಿಸಿದ್ದಾರೆ. ಸೋದರಳಿಯ ಆಕಾಶ್ ಆನಂದ್ ಉತ್ತಾರಾಧಿಕಾರಿ ಎಂದು ಈ ಹಿಂದೆ ಘೋಷಿಸಿದ್ದರು. ಇದೀಗ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾಗೊಳಿಸಿರುವುದಾಗಿ ಉನ್ನತ ಮಟ್ಟದ ಸಭೆಯಲ್ಲಿ ತಿಳಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕೆ ಸೋದರಳಿಯ ಆಕಾಶ್ ಆನಂದ್, ಮಾವ ಅಶೋಕ್ ಸಿದ್ದಾರ್ಥ್ ಅವರನ್ನು ಪಕ್ಷದಿಂದ ಉಚ್ಛಾಟಿಸುವುದಾಗಿ ಕಳೆದ ತಿಂಗಳು ಹೇಳಿದ್ದರು.
ಇನ್ನು ಸಹೋದರ ಆನಂದ್ ಗೌತಮ್ ಹಾಗೂ ರಾಮಜಿ ಗೌತಮ್ ಅವರನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದಾರೆ. ಪಕ್ಷವನ್ನು ಇನ್ನಷ್ಟು ಬಲಪಡಿಸುವುದು ಹಾಗೂ ನ್ಯೂನತೆಗಳನ್ನು ಬಗೆಹರಿಸುವ ಸಂಬಂಧ ಈ ಸಭೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಕಳೆದ ಬಾರಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ಪಿ ಸಂಪೂರ್ಣವಾಗಿ ನೆಲಕಚ್ಚಿದೆ.