ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ಸಾಮಾಜಿಕ ಹೋರಾಟಗಾರ್ತಿ, ನರ್ಮದಾ ಬಚಾವೋ ಹೋರಾಟದ ನಾಯಕಿ ಮೇಧಾ ಪಾಟ್ಕರ್(medha patkar) ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ವಿಧಿಸಿದ್ದ ಜೈಲು ಶಿಕ್ಷೆ ಅಮಾನತುಗೊಳಿಸಲಾಗಿದೆ. 5 ತಿಂಗಳ ಸಾದಾ ಶಿಕ್ಷೆಯನ್ನು ವಿಧಿಸಲಾಗಿತ್ತು. ಅದನ್ನು ಪ್ರಶ್ನಿಸಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲು ಹತ್ತಿದ್ದರು. ಕೋರ್ಟ್ ನ್ಯಾಯಾಧೀಶ ರಾಘವ್ ಶರ್ಮಾ ಶಿಕ್ಷೆಯನ್ನು ಅಮಾನತುಗೊಳಿಸಿದ್ದಾರೆ.
ಇನ್ನು ಮೇಧಾ ಪಾಟ್ಕರ್ ಎದುರಾಳಿ ವಿ.ಕೆ ಸಕ್ಸೇನಾ(VK Saxena) ಅವರಿಗೆ ನೋಟಿಸ್ ನೀಡಿದ್ದಾರೆ. ಸೆಪ್ಟೆಂಬರ್ 4ರೊಳಗೆ ನೋಟಿಸ್ ಗೆ ಉತ್ತರಿಸುವಂತೆ ಸೂಚಿಸಲಾಗಿದೆ. 25 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್ ನೀಡಲು ಹೇಳಿ ಮೇಧಾ ಪಾಟ್ಕರ್ ಗೆ ಜಾಮೀನು ಮಂಜೂರು ಮಾಡಲಾಗಿದೆ. 23 ವರ್ಷಗಳ ಹಿಂದೆ ಈಗನ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸೆಕ್ಸೇನಾ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸಕ್ಸೇನಾ ಹೇಡಿ, ದೇಶಭಕ್ತ ಅಲ್ಲ, ಹವಾಲಾ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಅಂದು ಮೇಧಾ ಪಾಟ್ಕರ್ ಆರೋಪಿಸಿದ್ದರು. ಈ ಸಂಬಂಧ 2001ರಲ್ಲಿ ವಿ.ಕೆ ಸಕ್ಸೇನಾ ದೂರು ದಾಖಲಿಸಿದ್ದರು.