ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ. ಇದೀಗ ಆತನ ಬಂಧನವಾಗಿದೆ ಎಂದು ವರದಿಯಾಗಿದೆ. ಬೆಲ್ಜಿಯಂ ಅಧಿಕಾರಿಗಳು ಚೋಕ್ಸಿ ಬಂಧನದ ಬಗ್ಗೆ ತಿಳಿಸಿದ್ದಾರಂತೆ. ಈತನ ಬಂಧನಕ್ಕಾಗಿ ಸಿಬಿಐ, ಇಡಿ ಮನವಿ ಮಾಡಿಕೊಂಡಿದ್ದವು. ಶನಿವಾರ ಈತನನ್ನು ಬಂಧಿಸಲಾಗಿದ್ದು, ಜೈಲಿನಲ್ಲಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 13,850 ಕೋಟಿ ರೂಪಾಯಿ ಸಾಲ ಪಡೆದಿದ್ದ ಮೆಹುಲ್ ಚೋಕ್ಸಿ ಹಾಗೂ ನೀರವ್ ಮೋದಿ ಮಾವ ಹಾಗೂ ಸೋದರಳಿಯ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿದ್ದರು. 2018ರಿಂದಲೇ ಇವರಿಬ್ಬರು ತಲೆ ಮರೆಸಿಕೊಂಡಿದ್ದಾರೆ. ಆಂಟಿಗುವಾ, ಬಾರ್ಬುಡಾದಲ್ಲಿ ಆರಂಭದಲ್ಲಿ ನೆಲೆಸಿದ್ದರಂತೆ. ಇತ್ತೀಚೆಗೆ ಬೆಲ್ಜಿಯಂನ ಆಂಟ್ವೆರ್ಪೆನಲ್ಲಿರುವ ಮಾಹಿತಿ ಸಿಕ್ಕಿತು.
ಚೋಕ್ಸಿ ಬಂಧನ ಸಂಬಂಧ ಭಾರತ ಸರ್ಕಾರ ಬೆಲ್ಜಿಯಂಗೆ ಮನವಿ ಮಾಡಿತ್ತು. ಇದೀಗ ಬಂಧನವಾಗಿದ್ದು, ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗಳು ನಡೆಯಲಿವೆ. ಇನ್ನು ಇತನ ಸೋದರಳಿಯ ನೀರವ್ ಮೋದಿ ಲಂಡನ್ ಜೈಲಿನಲ್ಲಿದ್ದು ಇವನನ್ನು ಭಾರತಕ್ಕೆ ಕರೆತರಬೇಕಿದೆ. ಇನ್ನು ವಿಜಯ್ ಮಲ್ಯ ಸಹ ಸಾವಿರಾ ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿದ್ದು, ಇವನನ್ನು ಸ್ವದೇಶಕ್ಕೆ ತಂದು ವಿಚಾರಣೆ ನಡೆಸಬೇಕಿದೆ.