ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಸಾಲಗಾರನ ಬಡ್ಡಿ ಕಿರುಕುಳದಿಂದ ಯುವಕನೊಬ್ಬ ಲಾರಿಗೆ ತಲೆಕೊಟ್ಟು ಭೀಕರಾಗಿ ಆತ್ಮಹತ್ಯೆ ಮಾಡಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸಿದ್ದಮ್ಮ ಮ. ಕೆಚನ್ನವರ ಎನ್ನುವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆ ಹಿನ್ನಲೆ: ಮಹೇಶ ಚಿಕ್ಕವೀರಮಠ ಎಂಬುವರಿಂದ ಕೆಲ ವರ್ಷಗಳ ಹಿಂದೆ ಸಿದ್ದಪ್ಪ ಮ.ಕೆಚನ್ನವರ 10 ಲಕ್ಷ ರೂಪಾಯಿ ಸಾಲ ಪಡೆದಿದ್ದನಂತೆ. ಇದಕ್ಕೆ ಬಡ್ಡಿಯಾಗಿ 65 ಲಕ್ಷ ರೂಪಾಯಿ ಮರುಪಾವತಿ ಮಾಡಿದ್ದನಂತೆ. ಆದರೂ ಪದೆಪದೆ ಬಡ್ಡಿ ನೀಡುವಂತೆ ಒತ್ತಡ ಹಾಕುತ್ತಿದ್ದನಂತೆ. ಆತನ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಡೆತ್ ನೋಟ್ ಬರೆದಿದ್ದಾನೆ. ಅದನ್ನು ತನ್ನ ವಾಟ್ಸಪ್ ಸ್ಟೇಟಸ್ ಗೂ ಇಟ್ಟುಕೊಂಡಿರುವುದು ತಿಳಿದು ಬಂದಿದೆ.
ನನ್ನ ಪಾಡಿಗೆ ನಾನು ಜೀನವ ಮಾಡಿಕೊಂಡು ಖುಷಿಯಿಂದ ಇದ್ದೆ. ಮಹೇಶ ಚಿಕ್ಕವೀರಮಠ ಅನ್ನೋ ವಿಷಜಂತು ಪರಿಚಯವಾಯಿತು. ನನ್ನ ಸಾವಿಗೆ ಮಹೇಶ ಚಿಕ್ಕವೀರಮಠ ಇವನೇ ಕಾರಣ. ಇವನು ಸಮಾಜ ಸೇವಕ ಅಂತಾ ಗುರುತಿಸಿಕೊಂಡಿರೊ ಸಮಾಜ ಘಾತುಕ. ಈತ ನನಗೆ ವ್ಯವಹಾರ ಮಾಡು ಒಳ್ಳೆಯದಾಗುತ್ತೆ ಅಂತಾ ಹೇಳಿ ನಾನು ಬೇಡರಿ ಅಂತ ಹೇಳಿದರೂ ಅವರ ಇವರ ಹೆಸರು ಹೇಳಿ 10 ಲಕ್ಷ ರೂಪಾಯಿ ಕೊಟ್ಟರು. ಹಂತ ಹಂತವಾಗಿ 7 ವರ್ಷಗಳ ಹಿಂದೆಯಿಂದ ಕೊಡುತ್ತಾ ಬಂದರೂ ಅದಕ್ಕೆ ಪ್ರತಿಯಾಗಿ ಅದಕ್ಕೆ ಪ್ರತಿಯಾಗಿ 65 ಲಕ್ಷ ರೂಪಾಯಿ ಬಡ್ಡಿ ತೆಗೊಂಡು ನನ್ನ ಜೀವನ ಸರ್ವನಾಶ ಮಾಡಿದರು. ಎಂಎಲ್ಎ, ಎಂಪಿ ಪರಿಚಯ ಇದಾರೆ ಅಂತಾ ಹೇಳಿ ಹೇಳಿ ನನ್ನ ಹೆದರಿ ಬಡ್ಡಿ ತಗೊತ್ತಿದ್ದ ಎಂದು ಸುಮಾರು ಎರಡೂವರೆ ಪುಟದ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.