ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಮೈಕ್ರೋ ಫೈನಾನ್ಸ್(Micro Finance) ಕಿರುಕುಳದಿಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣ ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಯಶೋದಮ್ಮ(60) ಮೃತ ಮಹಿಳೆಯಾಗಿದ್ದಾರೆ. 8ಕ್ಕೂ ಹೆಚ್ಚು ಕಂಪನಿಗಳಲ್ಲಿ ಸಾಲ ಮಾಡಿದ್ದರಂತೆ. ಫೈನಾನ್ಸ್ ನವರು ಇತ್ತೀಚೆಗೆ ಮನೆಗೆ ಬಂದು ಗಲಾಟೆ ಮಾಡಿದ್ದರಂತೆ. ಇದೇ ವಿಚಾರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಇದೇ ತಾಲೂಕಿನ ಕೋನಮುದ್ದನಹಳ್ಳಿ ಬ್ರ್ಯಾಂಚ್ ಮ್ಯಾನೇಜರ್ ಗ್ರಾಮಸ್ಥರಿಗೆ ಕಿರುಕುಳ ಕೊಡುತ್ತಿದ್ದಾನೆಂದು ಬಂಧಿಸಲಾಗಿದೆ. ಇದೀಗ ಮತ್ತೊಂದು ಗ್ರಾಮದಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತೀಚೆಗೆ ತುಮಕೂರಿನಲ್ಲಿ ಹೇಮಾವತಿ ನಾಲೆಗೆ ಹಾರಿ ಸಾದಿಕ್ ಬೇಗಂ ಎನ್ನುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ ಬಿಐ ಗೈಡ್ ಲೈನ್ಸ್ ಮೀರಿ ಬಡ್ಡಿ ವಸೂಲಿ ಮಾಡಬಾರದು ಎಂದು ರಾಮನಗರ ಎಸ್ಪಿ ಶ್ರೀನಿವಾಸಗೌಡ ಎಚ್ಚರಿಕೆ ನೀಡಿದ್ದಾರೆ. ಆದರೂ ಅಲ್ಲೊಂದು ಇಲ್ಲೊಂದು ಘಟನೆಗಳು ನಡೆಯುತ್ತಿವೆ.