ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ರಾಜ್ಯದಲ್ಲಿ ಕೆಎಸ್ಆರ್ ಟಿಸಿ ಬಸ್ ಟಿಕೆಟ್ ದರ ಶೇಕಡ 15ರಷ್ಟು ಏರಿಕೆಗೆ ಸಚಿವ ಸಂಪುಟದಲ್ಲಿ ಗುರುವಾರ ಸಮ್ಮತಿ ಸಿಕ್ಕಿದೆ. ಇದಕ್ಕೆ ವಿಪಕ್ಷಗಳಿಂದ ಹಿಡಿದು ಸಾರ್ವಜನಿಕರು ಆಕ್ರೋಶ ವ್ಯಪಡಿಸುತ್ತಿದ್ದಾರೆ. ಇದನ್ನು ಸಮರ್ಥಿಸಿಕೊಂಡಿರುವ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಬಸ್ ಟಿಕೆಟ್ ದರ ಏರಿಕೆ ಸಹಜ ಪ್ರಕ್ರಿಯೆ. ಡೀಸೆಲ್ ಬೆಲೆ ಏರಿಕೆಯಾದರೂ ಕೆಲ ವರ್ಷಗಳಿಂದ ಬಸ್ ಟಿಕೆಟ್ ದರ ಏರಿಕೆಯಾಗಿರಲಿಲ್ಲ. ಹಿಂದಿನ ಸರ್ಕಾರದಲ್ಲಿ ದರ ಪರಿಷ್ಕರಣೆ ಆಗಿರಲಿಲ್ಲವೇ ಎಂದರು.
ಬಸ್ ಟಿಕೆಟ್ ದರ ಏರಿಕೆಯಿಂದ 400 ಕೋಟಿ ರೂಪಾಯಿ ಆದಾಯ ಬರಬಹುದು. ಆದರೆ ಇದರಿಂದ ಗ್ಯಾರೆಂಟಿ ಯೋಜನೆಗೆ ಹಣ ಸಂಗ್ರಹಿಸುವ ಯೋಜನೆ ಇಲ್ಲ. ಗ್ಯಾರೆಂಟಿಗಳಿಗಾಗಿ 59 ಸಾವಿರ ಕೋಟಿ ರೂಪಾಯಿ ಮೀಸಲು ಇಡಲಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ಬಸ್ ಟಿಕೆಟ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.