ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗೃಹ ಸಚಿವ ಜಿ.ಪರಮೇಶ್ವರ್ ಇಂದು ಕರೆದಿದ್ದ ಡಿನ್ನರ್ ಮೀಟಿಂಗ್ ರದ್ದಾಗಿದೆ. ಈ ರೀತಿಯ ಡಿನ್ನರ್ ಮೀಟಿಂಗ್ ಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ ಎಂದು ಹೇಳಲಾಗುತ್ತಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಈ ಬಗ್ಗೆ ಹೈಕಮಾಂಡ್ ಗೆ ದೂರು ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಡಿನ್ನರ್ ಮೀಟಿಂಗ್ ರದ್ದಾಗಿಲ್ಲ. ಮುಂದೂಡಲಾಗಿದೆ ಎಂದಿದ್ದಾರೆ.
ಸಧ್ಯಕ್ಕೆ ಸಭೆ ಮುಂದೂಡಲಾಗಿದೆ. ಮುಂದೆ ನಡೆಸುತ್ತೇವೆ. ನಮ್ಮ ಸಭೆಯನ್ನು ಸಹಿಸುವುದಿಲ್ಲ ಎಂದು ಯಾರೂ ಹೇಳಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಸಭೆಗೆ ಕರೆಯುತ್ತೇವೆ. ರಾಜಕೀಯ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಕದ್ದುಮುಚ್ಚಿ ಮಾಡುವಂತದ್ದೂ ಏನೂ ಇಲ್ಲ ಎಂದು ಹೇಳಿದರು. ಸಚಿವರು ಈ ರೀತಿಯಾಗಿ ಡಿನ್ನರ್ ಸಭೆಗಳನ್ನು ಆಯೋಜಿಸುತ್ತಿರುವುದರ ಹಿಂದೆ ಸಿಎಂ ಬದಲಾವಣೆಗೆ ಹೊಗೆ ಆಡುತ್ತಿದೆ. ಎಷ್ಟು ಸತ್ಯ ಎಷ್ಟು ಮಿಥ್ಯ ಎನ್ನುವುದು ಮುಂದೆ ತಿಳಿಯಲಿದೆ.