ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಆರ್ ಎಸ್ಎಸ್ ಆದಾಯ ಮೂಲದ ಪ್ರಶ್ನೆ ಎತ್ತಿದ್ದೇ ತಡ ಬಿಜೆಪಿಯ ಸಂಗಪ್ಪಗಳು ಆರ್ ಎಸ್ಎಸ್ ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ರೀತಿಯಾಗಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆರ್ ಎಸ್ಎಸ್ ಸಮರ್ಥಿಸುವುದು ಅನಿವಾರ್ಯ. ಬಿಜೆಪಿ ನಾಯಕರು ತಾವು ಮಾಡಿದ ಟೀಕೆ, ತಾವು ನೀಡಿದ ಹೇಳಿಕೆಗಳೆಲ್ಲದರ ರಿಪೋರ್ಟ್ ಕಾರ್ಡನ್ನು ನಾಗಪುರಕ್ಕೆ ಕಳಿಸಿಕೊಡಬೇಕು. ಯಾರು ಹೆಚ್ಚು ತೀವ್ರವಾಗಿ ನನ್ನನ್ನು ನಿಂದಿಸಿರುತ್ತಾರೋ ಅವರಿಗೆ ಪ್ರಮೋಷನ್ ದೊರಕಲಿದೆ! ಈ ಮೂಲಕ ಆರ್ ಎಸ್ಎಸ್ ಹಾಗೂ ಬಿಜೆಪಿಗೆ ಸಂಬಂಧವಿಲ್ಲ ಎಂದು ಮೋಹನ್ ಭಾಗವತರ ಹೇಳಿಕೆ ಶತಮಾನದ ಸುಳ್ಳು ಎಂಬುದನ್ನು ಬಿಜೆಪಿಯವರೇ ನಿರೂಪಿಸುತ್ತಿದ್ದಾರೆ. ಆರ್ ಎಸ್ಎಸ್ ಚಿವುಟಿದರೆ ಬಿಜೆಪಿ ಅಳುವುದೇಕೆ ಎಂದು ಪ್ರಶ್ನಿಸಿದ್ದಾರೆ.




