ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಜಮ್ಮು ಕಾಶ್ಮೀರದ ಪುಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದಾರೆ. ಈ ಸಂಬಂಧ ಕೇಂದ್ರದ ಗುಪ್ತಚರ ವೈಫಲ್ಯ ಎದ್ದು ಕಾಣುತ್ತಿದೆ. ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ಸಚಿವ ಸಂತೋಷ್ ಲಾಡ್ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಪ್ರಧಾನಿ ಮೋದಿ ರಾಜೀನಾಮೆ ಕೇಳುತ್ತಿರುವುದು ಹಾಸ್ಯಸ್ಪದ. ಪಹಲ್ಗಾಮ್ ದಾಳಿ ವಿಚಾರದಲ್ಲಿ ಕೇಂದ್ರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲವೆಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇದು ಸಂತೋಷ್ ಲಾಡ್ ಗೆ ಸಮಾಧಾನ ತಂದಿಲ್ಲವೆಂದು ಕಿಡಿ ಕಾರಿದರು.
ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ದಾಳಿ ನಡೆದಿದ್ದು ತಿಳಿದ ತಕ್ಷಣ ವಿದೇಶ ಪ್ರವಾಸದಿಂದ ವಾಪಸ್ ಬಂದ ಪ್ರಧಾನಿ ಮೋದಿ ತುರ್ತು ಸಭೆ ನಡೆಸಿದ್ದಾರೆ. ಪಾಕಿಸ್ತಾನದ ವಿರುದ್ಧ ಗಟ್ಟಿ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. 2004ರಿಂದ 2014ರ ವರೆಗಿನ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಉಗ್ರರ ದಾಳಿಯ ಅಂಕಿಅಂಶ ನೀಡಲಿ. ಬಿಜೆಪಿ ಅವಧಿಯಲ್ಲಿ ಶೇಕಡ 70ರಷ್ಟು ಬಾಂಬ್ ದಾಳಿ, ಕಲ್ಲು ತೂರಾಟ, ನಾಗರಿಕ ಹತ್ಯೆ ಪ್ರಕರಣಗಳು ನಿಂತಿವೆ ಎಂದು ಹೇಳಿದರು.