ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಸದನದಲ್ಲಿ ತಮ್ಮ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಅಶ್ಲೀಲ ಪದ ಬಳಿಸಿದ್ದಾರೆ ಎನ್ನುವ ಸಂಬಂಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರು ನೀಡಿದ ಬಳಿಕ ಏನೆಲ್ಲ ಆಯ್ತು ಅನ್ನೋದು ರಾಜ್ಯದ ಜನತೆ ನೋಡಿದ್ದಾರೆ. ಈ ಬಗ್ಗೆ ಸೋಮವಾರ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿರುವ ಅವರು, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ನಡೆದುಕೊಂಡಿದ್ದೀರಿ. ಮಹಿಳಾ ಕುಲದ ಶಾಪ ನಿಮಗೆ ತಟ್ಟದೆ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಆವತ್ತು ರಾಹುಲ್ ಗಾಂಧಿ ಹೆಸರನ್ನು ಯಾಕೆ ತೆಗೆದುಕೊಂಡು ಬಂದ್ದೀರಿ. ಡ್ರಗ್ ಅಡಿಕ್ಟ್ ರಾಹುಲ್ ಗಾಂಧಿ ಎಂದು ಡ್ಯಾನ್ಸ್ ಮಾಡುತ್ತಿದ್ದೀರಿ. ನಮ್ಮ ನಾಯಕನ ಹೆಸರನ್ನು ಈ ಮಟ್ಟಕ್ಕೆ ತಗೊಂಡ್ರೆ ನಾವು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಪ್ರಶ್ನಿಸಿದ ಸಚಿವರು, ಅಪಘಾತ ಮಾಡಿ ಮೂರು ಮುಗ್ದ ಜನರ ಜೀವ ತೆಗೆದಿದ್ದಕ್ಕೆ ತಾನು ನಾನು ನಿಮಗೆ ಕೊಲೆಗಾರ ಪದ ಬಳಿಸಿದ್ದು. ನೀವು ನನಗೆ ಆ ಪದ ಬಳಿಸಿದ್ದು. ಇಷ್ಟು ದೊಡ್ಡ ಪಟ್ಟಿಯನ್ನು ಕಟ್ಟಿಕೊಂಡು ಎಷ್ಟು ದೊಡ್ಡ ನಾಟಕ ಮಾಡುತ್ತಿದ್ದೀರಿ. ಮಹಿಳೆಯರು ಎಂದಿಗೂ ನಿಮ್ಮನ್ನ ಕ್ಷಮಿಸುವುದಿಲ್ಲ ಎಂದು ಹೇಳಿ ಮಾಧ್ಯಮಗಳ ಎದುರು ಆಡಿಯೋವನ್ನು ಬಿಡುಗಡೆ ಮಾಡಿದರು.
ಎರಡು ದಿನಗಳಿಂದ ನನಗೆ ಆಘಾತವಾಗಿತ್ತು. ನಾನು ಏನು ಮಾತನಾಡಿರಲಿಲ್ಲ. ನಾನು ಮತ್ತೊಮ್ಮೆ ಸಭಾಪತಿಗೆ ದೂರು ನೀಡುತ್ತೇನೆ. ಅವರಿಗೆ ಶಿಕ್ಷೆಯಾಗುವ ತನಕ ಲಕ್ಷ್ಮಿ ಹೆಬ್ಬಾಳ್ಕರ್ ಸುಮ್ಮನೆ ಕುರುವುದಿಲ್ಲ. ಇವರೆಲ್ಲ ಗೋಮುಖವ್ಯಾಘ್ರಗಳು. ಮಹಿಳೆಗೆ ಹೀಗೆಲ್ಲ ಮಾತನಾಡಿದರೆ ಬಿಜೆಪಿಯವರು ಬೆಂಬಲ ಮಾಡುತ್ತಾರೆ. ಅವರಿಗೆ ಎಷ್ಟು ಗಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.