ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ತಹಶೀಲ್ದಾರ್ ಕಚೇರಿಯ ನ್ಯಾಯಾಲಯ ವಿಭಾಗದ ಕೆಲಸ ನೋಡಿಕೊಳ್ಳುತ್ತಿದ್ದ ಎಸ್ ಡಿಎ ಅಧಿಕಾರಿ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬುಧವಾರ ಪ್ರತಿಕ್ರಿಯೆ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈ ಪ್ರಕರಣದಲ್ಲಿ ನನ್ನ ಆಪ್ತ ಸಹಾಯಕ ಸೋಮು ಭಾಗಿಯಾಗಿರುವುದು ಗೊತ್ತಿಲ್ಲ. ಮೃತ ರುದ್ರಣ್ಣನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.
ಈಗಾಗ್ಲೇ ಪ್ರಾಥಮಿಕ ತನಿಖೆ ನಡೆಯುತ್ತಿದೆ. ಸತ್ಯ ಹೊರ ಬರಲಿ. ನಮ್ಮ ಕೆಲಸಗಳಿಗೆ ಅನುಕೂಲವಾಗಲಿ ಎಂದು ಪಿಎಗಳನ್ನು ನೇಮಿಸಿಕೊಂಡಿರುತ್ತೇವೆ. ಸೋಮು ಹೆಸರು ಪ್ರಕರಣದಲ್ಲಿರುವುದು ಮಾಧ್ಯಮಗಳ ಮೂಲಕವೇ ತಿಳಿದಿದೆ. ನೈತಿಕ ಹೊಣೆ ಹೊತ್ತು ನಾನು ರಾಜೀನಾಮೆ ನೀಡಬೇಕೆಂದು ಬಿಜೆಪಿಯವರು ಪ್ರತಿಭಟನೆ ಮಾಡಿದ್ದಾರೆ. ರುದ್ರಣ್ಣ ಎಲ್ಲಿಯೂ ನನ್ನ ಹೆಸರು ಬರೆದಿಲ್ಲ. ಸೋಮು ಹೆಸರಿನ ಜೊತೆಗೆ ನನ್ನ ಹೆಸರು ಬಳಸಿಲ್ಲ. ಕೆ.ಎಸ್ ಈಶ್ವರಪ್ಪ ಪ್ರಕರಣ ಇದು ವ್ಯತ್ಯಾಸವಿದೆ. ಗುತ್ತಿಗೆದಾರ ಸಂತೋಷ ಪಾಟೀಲ ಕೆ.ಎಸ್ ಈಶ್ವರಪ್ಪ ಹೆಸರು ಬರೆದಿಷ್ಟು ಕಮಿಷನ್ ದಾಖಲೆಗಳನ್ನು ನೀಡಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿದರು.