Ad imageAd image

ಮುಂದಿನ 10 ವರ್ಷದಲ್ಲಿ 5 ಕೋಟಿ ಗಿಡ ನೆಡುವ ಗುರಿ: ಸಚಿವ ಎಂ.ಬಿ ಪಾಟೀಲ

Nagesh Talawar
ಮುಂದಿನ 10 ವರ್ಷದಲ್ಲಿ 5 ಕೋಟಿ ಗಿಡ ನೆಡುವ ಗುರಿ: ಸಚಿವ ಎಂ.ಬಿ ಪಾಟೀಲ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ(Vijayapura): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ ವೃಕ್ಷಥಾನ್ ಪಾರಂಪರಿಕ ಓಟ-2025 ಭಾನುವಾರ ಯಶಸ್ವಿಯಾಗಿ ಜರುಗಿತು. 21 ಕಿ.ಮೀ, 10 ಕಿ.ಮೀ ಹಾಗೂ 5 ಕಿ.ಮೀ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಪಾರಂಪರಿಕ ಓಟ ಕಾರ್ಯಕ್ರಮದಲ್ಲಿ ಹಲವು ಖ್ಯಾತನಾಮರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮ್ಯಾರಥಾನ್‌ಗೆ ಚಾಲನೆ ನೀಡಿದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು 5 ಕಿ.ಮೀ. ಓಡಿ ಯುವಕರನ್ನು ಹುರಿದುಂಬಿಸಿದರು.

ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವ  ಸಾರುವ ನಿಟ್ಟಿನಲ್ಲಿ ಕೋಟಿ ವೃಕ್ಷ ಅಭಿಯಾನದ ಅಂಗವಾಗಿ ಭಾನುವಾರ ಹಮ್ಮಿಕೊಂಡ ವೃಕ್ಷಥಾನ ಪಾರಂಪರಿಕ ಓಟದ ಬಹುಮಾನ ವಿತರಣೆ ಸಮಾರಂಭದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ಭವಿಷ್ಯದಲ್ಲಿ ಪರಿಸರ ಹಾಗೂ ಭವ್ಯ ಸ್ಮಾರಕಗಳ ಸಂರಕ್ಷಣೆಯ ಆಶಯಗಳನ್ನೊಳಗೊಂಡ ಈ ಕಾರ್ಯಕ್ರಮದ ಉದ್ಧೇಶವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಚ ಸುಂದರ ಪರಿಸರ ಒದಗಿಸಿಕೊಡುವುದು ಹೊಣೆ ನಮ್ಮದಾಗಿದೆ.

ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ, ಅಭಿವೃದ್ಧಿಪಡಿಸಿ ಸ್ಮಾರಕಗಳ ಬಗ್ಗೆ ವ್ಯಾಪಕ ತಿಳುವಳಿಕೆ ಮೂಡಿಸಬೇಕು. ವೃಕ್ಷಥಾನ ಪಾರಂಪರಿಕ ಓಟ ಇತಿಹಾಸ ನಿರ್ಮಾಣ ಮಾಡಿದೆ. ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ  2016-17ರ ಅವಧಿಯಲ್ಲಿ ಕೋಟಿ ವೃಕ್ಷ ಅಭಿಯಾನ ಆರಂಭಿಸುವ ಮೂಲಕ ಜಿಲ್ಲೆಯ ಅರಣ್ಯೀಕರಣವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಕೋಟಿ ವೃಕ್ಷ ಅಭಿಯಾನ ಪ್ರಾರಂಭ ಮಾಡಿ, ಜಿಲ್ಲೆಯಲ್ಲಿ 1.5 ಕೋಟಿ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ. 2035ರ ಹೊತ್ತಿಗೆ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

21 ಕಿ. ಮೀ ಪುರುಷರ ವಿಭಾಗ : 18 ರಿಂದ 34 ವರ್ಷ- ಶಿವಾನಂದ ಚಿಗರಿ (ಪ್ರಥಮ), ಪ್ರವೀಣ ಕಾಂಬಳೆ (ದ್ವಿತೀಯ), ಪ್ರಜ್ವಲ ಎಸ್. ವೈ.- (ತೃತೀಯ) 35 ರಿಂದ 44 ವರ್ಷ- ನಂಜುಂಡಪ್ಪ ಎನ್. (ಪ್ರಥಮ), ರಾಮನಾಥ ಬೊಂಬಿಲವಾರ (ದ್ವಿತೀಯ), ವೀರಣ್ಣ ಬಂಡಿ- (ತೃತೀಯ) 45 ರಿಂದ 59 ವರ್ಷ- ಮಂಜೀತ ಸಿಂಗ್ (ಪ್ರಥಮ), ಸಾಲ್ವೆರಾಮ ಶಿಂಧೆ (ದ್ವಿತೀಯ), ಸೈಫುದ್ದೀನ್ ಎ. ಕೆ.- (ತೃತೀಯ) 60 ವರ್ಷ ಮೇಲ್ಪಟ್ಟವರು- ಪಾಂಡುರಂಗ ಚೌಗುಲೆ (ಪ್ರಥಮ), ಕೇಶವ ಮೋತೆ (ದ್ವಿತೀಯ), ಬಸವರಾಜ ಹುಂಬೆರಿ ತೃತೀಯ.

21 ಕಿ. ಮೀ. ಮಹಿಳೆಯರ ವಿಭಾಗ: 18 ರಿಂದ 34 ವರ್ಷ- ಸುಶ್ಮಿತಾ ವಿ. ಎಂ. (ಪ್ರಥಮ), ಸುಧಾರಾಣಿ ಪೂಜಾರಿ (ದ್ವಿತೀಯ), ಅನುಪಮ ಪೂಜಾರಿ (ತೃತೀಯ) 35 ರಿಂದ 44 ವರ್ಷ- ದೀಪಿಕಾ ಪ್ರಕಾಶ (ಪ್ರಥಮ), ತಾನ್ಯ ಅಬ್ರಹಾಂ ಗಂಗೂಲಿ (ದ್ವಿತೀಯ), ನಾಗರತ್ನ ಯಲಗೊಂಡೆ (ತೃತೀಯ) 45 ರಿಂದ 59 ವರ್ಷ- ಸವಿತಾ ಕಲ್ಲೂರ (ಪ್ರಥಮ) 60 ವರ್ಷ ಮೇಲ್ಪಟ್ಟವರು- ಸುಲತಾ ಕಾಮತ (ಪ್ರಥಮ).

10 ಕಿ. ಮೀ. ಪುರುಷರ ವಿಭಾಗ: 18 ರಿಂದ 34 ವರ್ಷ- ಸುಮಂತ ರಾಜಭರ (ಪ್ರಥಮ), ಅನಿಕೇತ ದೇಶಮುಖ (ದ್ವಿತೀಯ), ಭೈರು ಭೈರು (ತೃತೀಯ), 35 ರಿಂದ 44 ವರ್ಷ- ಪರಶುರಾಮ ಭೊಯಿ (ಪ್ರಥಮ), ಸಂಜಯ ನೇಗಿ (ದ್ವಿತೀಯ), ಪ್ರಶಾಂತ ಶಿರಹಟ್ಟಿ (ತೃತೀಯ), 45 ರಿಂದ 59 ವರ್ಷ- ಪರಶುರಾಮ ಗುಣಗಿ (ಪ್ರಥಮ), ದವ್ಯ ಸಂಚೀಸ್ (ದ್ವಿತೀಯ), ರಂಜಿತ ಕಣಬರಕರ (ತೃತೀಯ), 60 ವರ್ಷ ಮೇಲ್ಪಟ್ಟವರು- ವಿರುಪಾಕ್ಷಿ ಬಲಕುಂದಿ (ಪ್ರಥಮ), ಶಶಿಕಾಂತ ಬೆದ್ರೆ (ದ್ವಿತೀಯ), ಬಸವರಾಜ ಬಿಜ್ಜರಗಿ (ತೃತಿಯ).

10 ಕಿ. ಮೀ. ಮಹಿಳೆಯರ ವಿಭಾಗ: 18 ರಿಂದ 34 ವರ್ಷ- ಶಹೀನ ಎಸ್. ಡಿ. (ಪ್ರಥಮ), ಪ್ರಿಯಾ ಪಾಟೀಲ (ದ್ವಿತೀಯ), ವಿನಿತಾ ಪಾಲ (ತೃತೀಯ), 35 ರಿಂದ 44 ವರ್ಷ- ಚಂದನ ಕಲಿತಾ (ಪ್ರಥಮ) ಹುಸೇನಿಬಾಷಾ ಸೈಯ್ಯದ ದ್ವಿತೀಯ, ಸ್ಮೀತಾ ಬಿರಾದಾರ (ತೃತೀಯ), 45 ರಿಂದ 59 ವರ್ಷ- ಮೇಘನಾ ಬಾಳಿಕಾಯಿ ಪ್ರಥಮ, ಶೈಲಜಾ ಪಾಟೀಲ ದ್ವಿತೀಯ, ಶಕುಂತಲಾ ಎಸ್. ತೃತೀಯ, 60 ವರ್ಷ ಮೇಲ್ಪಟ್ಟವರು- ಪಾರ್ವತಿ ಬಿ. ಸಿ. ಪ್ರಥಮ.

5 ಕಿ. ಮೀ. ಪುರುಷರ ವಿಭಾಗ: 12 ರಿಂದ 17 ವರ್ಷ- ಅಬೂಬಕರ ಕಡಬಿ ಪ್ರಥಮ, ಪ್ರೇಮ ಡಾಂಗೆ ದ್ವಿತೀಯ, ಪುಷ್ಪೇಂದ್ರ ತೃತೀಯ,  18 ರಿಂದ 34 ವರ್ಷ- ಶ್ರೀಕಂಠ ಪ್ರಥಮ, ವಿಜಯ ಸಂಜಯ ದ್ವಿತೀಯ, ಈರಪ್ಪ ಬ್ಯಾಡಗಿ ತೃತೀಯ, 35 ರಿಂದ 44 ವರ್ಷ- ರಾಜು ಪಿರಗಣ್ಣನವರ ಪ್ರಥಮ, ಸುರೇಶ ಎಂ. ದ್ವಿತೀಯ, ಸುರೇಶ ಐ. ಬಿರಾದಾರ ತೃತೀಯ, 45 ರಿಂದ 59 ವರ್ಷ- ತುಳಜಪ್ಪ ದಾಸರ ಪ್ರಥಮ, ಅತುಲ ಬಂಡಿವಡ್ಡರ ದ್ವಿತೀಯ, ಡಾ.ಜಿ.ಡಿ.ಅಕಮಂಚಿ ತೃತೀಯ, 60 ವರ್ಷ ಮೇಲ್ಪಟ್ಟವರು-ಸಂಜಯ ಆನಂದ ಪಾಟೀಲ ಪ್ರಥಮ, ಉದಯ ಮಹಾಜನ ದ್ವಿತೀಯ, ಕದೀರಅಹ್ಮದ್ ಮಣಿಯಾರ ತೃತೀಯ.

5 ಕಿ. ಮೀ. ಮಹಿಳೆಯರ ವಿಭಾಗ: 12 ರಿಂದ 17 ವರ್ಷ- ಆರೋಹಿ ಪಟಮಾಸ ಪ್ರಥಮ, ಅಂಕಿತಾ ಯಾದವ ದ್ವಿತೀಯ, ಸ್ವರಾಂಜಲಿ ಭಾಂಡಗೆ ತೃತೀಯ, 18 ರಿಂದ 34 ವರ್ಷ-ನೂರಜಹಾನ ಮುಜಾವರ ಪ್ರಥಮ, ವಿಜಯಲಕ್ಣ್ಮಿ ಕರಲಿಂಗಣ್ಣನವರ ದ್ವಿತೀಯ, ನಕುಶಾ ಮಾನೆ ತೃತೀಯ, 35 ರಿಂದ 44 ವರ್ಷ- ಉಮಾ ಎಸ್. ಎಂ.,ಪ್ರಥಮ, ವೈಶಾಲಿ ಕೇಶವ ಗುಂಟುಕ ದ್ವಿತೀಯ, ಎಸ್.ಬಿ.ಕರಿಕಬ್ಬಿ ತೃತೀಯ, 45 ರಿಂದ 59 ವರ್ಷ-ವಿದ್ಯಾ ಬಿ.ಎಚ್ ಪ್ರಥಮ, ಆರ್.ವಿ.ಸೂರ್ಯವಂಶಿ ದ್ವಿತೀಯ, ಶೈಲಜಾ ಇಂಗಳೇಶ್ವರ ತೃತೀಯ, 60 ವರ್ಷ ಮೇಲ್ಪಟ್ಟವರು- ಗ್ಲ್ಯಾಡಿಸ್ ಪೈಸ್ ಪ್ರಥಮ, ಗಂಗವ್ವ ಬೆಳಗಾವಿ ದ್ವಿತೀಯ, ನೂರಜಹಾನ ಹುಲ್ಲೂರ ತೃತೀಯ ಸ್ಥಾನ ಪಡೆದಿದ್ದಾರೆ.

WhatsApp Group Join Now
Telegram Group Join Now
Share This Article