Ad imageAd image

ಒಪ್ಪಂದ ಆಗಿದ್ದರೆ ನಾವೆಲ್ಲ ಯಾಕೆ ಬೇಕು: ಸಚಿವ ಪರಮೇಶ್ವರ್ ಅಸಮಾಧಾನ

ಮುಖ್ಯಮಂತ್ರಿ ಹುದ್ದೆ ಒಪ್ಪಂದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಒಪ್ಪಂದ ಆಗಿದ್ದರೆ ನಾವೆಲ್ಲ ಯಾಕೆ ಬೇಕು? ಅವರಿಬ್ಬರೆ ರಾಜಕಾರಣ ಮಾಡಿ ಅವರೆ ನಡೆಸಲಿ

Nagesh Talawar
ಒಪ್ಪಂದ ಆಗಿದ್ದರೆ ನಾವೆಲ್ಲ ಯಾಕೆ ಬೇಕು: ಸಚಿವ ಪರಮೇಶ್ವರ್ ಅಸಮಾಧಾನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಮುಖ್ಯಮಂತ್ರಿ ಹುದ್ದೆ ಒಪ್ಪಂದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಜಿ.ಪರಮೇಶ್ವರ್, ಒಪ್ಪಂದ ಆಗಿದ್ದರೆ ನಾವೆಲ್ಲ ಯಾಕೆ ಬೇಕು? ಅವರಿಬ್ಬರೆ ರಾಜಕಾರಣ ಮಾಡಿ ಅವರೆ ನಡೆಸಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುರುವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಹತ್ತಿರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೆಹಲಿ ಹಾಗೂ ರಾಜ್ಯದಲ್ಲಿ ಇಬ್ಬರು, ಮೂವರಿಗೆ ಕೇಳಿದ್ದೇನೆ. ಯಾವುದೇ ಒಪ್ಪಂದವಾಗಿಲ್ಲ. ಹೈಕಮಾಂಡ್ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಈಗಾಗ್ಲೇ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಪ್ಪಂದವೆಲ್ಲ ನಮಗೆ ಗೊತ್ತಿಲ್ಲ. ಇನ್ನು ಕೆಪಿಸಿಸಿ ಹಾಗೂ ಸ್ವಾಭಿಮಾನಗಳ ಒಕ್ಕೂಟ ಜೊತೆಯಾಗಿ ಸಮಾವೇಶ ಮಾಡುತ್ತಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಚುನಾವಣೆಯ ಸಂದರ್ಭದಲ್ಲಿ ನಾವು ಜನರಿಗೆ ನೀಡಿದ ಭರವಸೆಗಳ ಬಗ್ಗೆ ತಿಳಿಸಬೇಕು. ವಿಪಕ್ಷಗಳು ಮಾಡುತ್ತಿರುವ ಸುಳ್ಳು ಆರೋಪಗಳ ಬಗ್ಗೆಯೂ ಜನರಿಗೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಸತ್ಯ ತಿಳಿಸುತ್ತೇವೆ ಎಂದರು.

WhatsApp Group Join Now
Telegram Group Join Now
Share This Article