ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಜೆಟ್ ಮೇಲಿನ ಚರ್ಚೆಯ ವೇಳೆ ಬಿಜೆಪಿ ಶಾಸಕ ಸುರೇಶಗೌಡ, ಸಿದ್ದರಾಮಯ್ಯನವರು ದಾಖಲೆ ಬಜೆಟ್ ಮಂಡಿಸಿದ ಮರುದಿನವೇ ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಜಾಹೀರಾತು ನೋಡಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೇಳಿಕೆಯಲ್ಲಷ್ಟೇ ಹಾಲು ಜೇನು. ವಾಸ್ತವದಲ್ಲಿ ಅಕ್ಕಪ್ಪಕ್ಕ ಕುಳಿತರೂ 10 ನಿಮಿಷ ಮುಖ ಕೊಟ್ಟು ಮಾತನಾಡುವುದಿಲ್ಲ ಎಂದರು. ಇವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಮೋದಿ, ಅಮಿತ್ ಶಾ ಅವರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ತಯಾರಿ ನಡೆಸಿದ್ದಾರೆ. ನೀವಿನ್ನೂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸುತ್ತಲೇ ಸುತ್ತುತ್ತಿದ್ದೀರಿ ಅಂತಾ ಟಾಂಟ್ ಕೊಟ್ಟರು.
ಖರ್ಗೆ ಮಾತಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಧ್ವನಿಗೂಡಿಸಿ, ಬಿಜೆಪಿಯಲ್ಲಿ ಕೆಲ ಸ್ನೇಹಿತರಿದ್ದಾರೆ. ಅವರಿಗೆ ನನ್ನನ್ನು ಜ್ಞಾಪಿಸಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ. ಬಜೆಟ್ ವಿರುದ್ಧ ಮಾತನಾಡಲು ಏನು ಸಿಗದ ಕಾರಣ ನನ್ನ ವಿಚಾರ ಎತ್ತಿದ್ದಾರೆ ಅಂತಾ ಹೇಳಿದರು.




