ಪ್ರಜಾಸ್ತ್ರ ಸದ್ದಿ
ದೇವದುರ್ಗ(Devadurga): ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಅವರ ನಿವಾಸಕ್ಕೆ ಕಳೆದ ರಾತ್ರಿ ದುಷ್ಕರ್ಮಿಗಳು ನುಗ್ಗಿದ ಘಟನೆ ನಡೆದಿದೆ. ಬೈಕ್ ನಲ್ಲಿ ತಡರಾತ್ರಿ ಬಂದ ಅಪರಿಚಿತರು ಮನೆಗೆ ನುಗ್ಗಿದ್ದಾರೆ. ನೆರೆಹೊರೆ ಮನೆಯವರು ಕೂಗಾಡುತ್ತಲೇ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವೇಳೆ ಶಾಸಕಿ ಕರೆಮ್ಮ ಮನೆಯ ಮಹಡಿಯಲ್ಲಿ ಮಲಗಿದ್ದರು. ಈ ಕುರಿತು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಒಂದಲ್ಲ ಅಪರಾಧ ಘಟನೆಗಳು ನಡೆಯುತ್ತಿದ್ದು, ಜನರು ನಿಜಕ್ಕೂ ಆತಂಕದಲ್ಲಿದ್ದಾರೆ. ಯಾವ ಹೊತ್ತಿನಲ್ಲಿ ಯಾರ ಮನೆಗೆ ಬರುತ್ತಾರೆ. ಏನೆಲ್ಲ ಮಾಡಿ ಹೋಗುತ್ತಾರೆ ಎನ್ನುವ ಆತಂಕ ಮೂಡಿದೆ. ಬ್ಯಾಂಕ್, ಮನೆ ದರೋಡೆ ಪ್ರತಿ ದಿನ ಒಂದಲ್ಲ ಒಂದು ಊರಿನಲ್ಲಿ ನಡೆಯುತ್ತಿದ್ದು, ರಾಜ್ಯಕ್ಕೆ ಹೊರ ರಾಜ್ಯದ ಕಿರಾತಕರು ಪ್ಲಾನ್ ಮಾಡಿ ನುಗ್ಗಿದ್ದಾರ ಎನ್ನುವ ಭಯ ಶುರುವಾಗಿದೆ.