ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಗ್ರಾಮ ಪಂಚಾಯ್ತಿಯ ಕಟ್ಟಡಕ್ಕೆ ಶುಕ್ರವಾರ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಕಲಕಾಂಬದಲ್ಲಿ ನಡೆದಿದೆ. ಶನಿವಾರ ಮುಂಜಾನೆ ಕೃತ್ಯ ಬೆಳಕಿಗೆ ಬಂದಿದೆ. ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಪೀಠೋಪಕರಣಗಳಿಗಿದೆ ಹಾನಿಯಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಕಿತ್ತುಕೊಂಡು ಹೋಗಿದ್ದಾರೆ.
ಬಿಯರ್ ಬಾಟಲ್ ನಲ್ಲಿ ಪೆಟ್ರೋಲ್ ತುಂಬಿದ್ದಾರೆ. ಅದಕ್ಕೆ ಬೆಂಕಿ ಹಚ್ಚಿ ಕಟ್ಟಡದ ಕಿಟಕಿಗೆ ಎಸೆದಿದ್ದಾರೆ. ಸ್ವಲ್ಪ ಹೊತ್ತು ಬೆಂಕಿ ಹತ್ತಿಕೊಂಡು ನಂತರ ಆರಿದೆ. ಇದರಿಂದಾಗಿ ಟೇಬಲ್, ಕುರ್ಚಿಗಳಿಗೆ ಹಾನಿಯಾಗಿದೆ. ಅದೃಷ್ಟಶಾತ್ ಯಾವುದೇ ದಾಖಲೆಗಳು ಹಾನಿಯಾಗಿಲ್ಲ. ಇದು ಸಚಿವ ಸತಿಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ವಿಧಾನಸಭೆ ಹಾಗೂ ಇವರ ಪುತ್ರಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಪ್ರತಿನಿಧಿಸುವ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೂ ಒಳಪಡುತ್ತೆ.