ಪ್ರಜಾಸ್ತ್ರ ಸುದ್ದಿ
ಬಾಲಿವುಡ್ ಅಂಗಳದ ಕಿರಣ್ ರಾವ್ ನಿರ್ದೇಶನದ ಲಾಪತಾ ಲೆಡೀಸ್ ಸಿನಿಮಾ ಆಸ್ಕರ್(Oscar Award) ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ಅತ್ಯುತ್ತಮ ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಆಯ್ಕೆ ಮಾಡಿ ಕಳಿಸಲಾಗಿದೆ. 13 ಜನರ ಆಯ್ಕೆ ಸಮಿತಿ 29 ಚಿತ್ರಗಳ ಪೈಕ್ ಲಾಪತಾ ಲೆಡೀಸ್(Laapataa Ladies) ಚಿತ್ರವನ್ನು ಆಯ್ಕೆ ಮಾಡಿದೆ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ತಿಳಿಸಿದೆ.
ಆಸ್ಕರ್ ಪ್ರಶಸ್ತಿ ನಾಮನಿರ್ದೇಶನಗೊಂಡಿರುವುದಕ್ಕೆ ನಿರ್ದೇಶಕಿ ಕಿರಣ್ ರಾವ್(Kiran Rao) ಖುಷಿಯನ್ನು ಹಂಚಿಕೊಂಡಿದ್ದಾರೆ. ನಟ ಆಮೀರ್ ಖಾನ್ ಪತ್ನಿಯಾಗಿರುವ ಕಿರಣ್ ರಾವ್ ಸಿನಿಮಾ ನಿರ್ದೇಶನ, ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಕಥೆಯನ್ನು ಹೊಂದಿರುವ ಸಿನಿಮಾದಲ್ಲಿ ಪುರುಷ ಪ್ರಧಾನ ಸಮಾಜದ ವ್ಯವಸ್ಥೆ ಬಗ್ಗೆ ತಿಳಿಸಲಾಗಿದೆ. ನಿತಾಂಶಿ ಗೋಯಲ್, ಸ್ವರ್ಶ ಶ್ರೀವಾಸ್ತವ, ರವಿ ಕಿಶನ್, ಪ್ರತಿಭಾ ರತ್ನಾ ಸೇರಿದಂತೆ ಅನೇಕರು ನಟಿಸಿದ್ದಾರೆ.