ಪ್ರಜಾಸ್ತ್ರ ಸುದ್ದಿ
ಆಲಮೇಲ(Alamela): ಪೀರ ಗಾಲಿಬ್ ಸಾಹೇಬ್ ಅಂಗವಿಕಲರ ವಿಕಾಸ ಸಂಘ ಆಲಮೇಲ ಘಟಕದಿಂದ ಜನವರಿ 3ರಂದು ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯಪುರ, ಎಂಆರ್ ಡಬ್ಲು, ವಿಆರ್ ಡಬ್ಲು, ಯುಆರ್ ಡಬ್ಲು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು. ಇದೆ ವೇಳೆ ಅಂಗವಿಕಲರ ಭವನದ ಭೂಮಿಯನ್ನು ನೆರವೇರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಅಶೋಕ ಮನಗೂಳಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು. ನಿಮ್ಮ ಮತ ನೀಡಿ ನಮಗೆ ಏನು ಅಧಿಕಾರ ನೀಡಿದ್ದರೀ, ಅದನ್ನು ನಿಮ್ಮ ಸೇವೆಗೆ ಮೀಸಲು ಇಡುವುದರ ಜೊತೆಗೆ ಅನುದಾನವನ್ನು ನಿಮಗೆ ಮುಟ್ಟಿಸುವ ಪ್ರಮಾಣಿಕ ಕೆಲಸ ಮಾಡುತ್ತೇವೆ ಎಂದರು. ಆಗಸ್ಟ್ 15ಕ್ಕೆ ಅಂಗವಿಕಲರ ಭವನ ಉದ್ಘಾಟನೆ ಮಾಡುವ ಕನಸಿದೆ ಅಂತಾ ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಆಲಮೇಲದ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಆಲಮೇಲ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಾದಿಕ್ ಸುಂಬಡ ಅಧ್ಯಕ್ಷತೆಯನ್ನು ವಹಿಸಿದ್ದರು. ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ವೀರಭದ್ರ ಕತ್ತಿ, ಮುಖ್ಯಾಧಿಕಾರ ಸುರೇಶ ನಾಯಕ, ಎಪಿಎಂಸಿ ಅಧ್ಯಕ್ಷ ಬಸವರಾಜ ಬಾಗೇವಾಡಿ, ಆಲಮೇಲ ಪಿಎಸ್ಐ ಅರವಿಂದ ಅಂಗಡಿ, ವಿಕಲಚೇತನರ ನೂಡಲ್ ಅಧಿಕಾರಿ ಪುಷ್ಪಾವತಿ ಬಿರಾದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅಂಗನವಾಡಿ ಹಿರಿಯ ಮೇಲ್ವಿಚಾರಕಿ ಜಯಶ್ರೀ ದೊಡಮನಿ, ಸಿಂದಗಿ ತಾಲೂಕು ಪಂಚಾಯ್ತಿಯ ಎಂಆರ್ ಡಬ್ಲು ಮುತ್ತುರಾಜ ಸಾತಿಹಾಳ, ಗುತ್ತಿಗೆದಾರ ಮಹಿಬೂಬ ಮಸಳಿ, ಕಾಂಗ್ರೆಸ್ ಎಸ್ಸಿ, ಎಸ್ಟಿ ಘಟಕದ ಆಲಮೇಲ ಅಧ್ಯಕ್ಷ ಸೋಮನಾಥ ಮೇಲಿನಮನಿ, ಗ್ಯಾರೆಂಟಿ ಯೋಜನೆ ಸಮಿತಿಯ ಪ್ರಶಾಂತ ನಾಶಿ, ಪೀರ್ ಗಲೀಬ್ ಸಾಹೇಬ ಅಂಗವಿಕಲರ ವಿಕಾಸ ಸಂಘದ ಗೌರವಾಧ್ಯಕ್ಷ ಸಂಶೋದೀನ್ ಬೆಣ್ಣೆ ಶೂರ್, ಅಧ್ಯಕ್ಷ ಸಿದ್ದರಾಮ ಕಲ್ಲೂರ, ಉಪಾಧ್ಯಕ್ಷ ಖಾಜಪ್ಪ ಬೋವಿ, ಸಂಘಟನಾ ಕಾರ್ಯದರ್ಶಿ ಸೈಬಣ್ಣ ಪೂಜಾರಿ, ಕಾರ್ಯದರ್ಶಿ ಮಲ್ಕಪ್ಪ ಬ್ಯಾಕೋಡ, ಖಜಾಂಚಿ ಶರಣಮ್ಮ ಕುಂಬಾರ, ಸದಸ್ಯರಾದ ಚಂದಮ್ಮ ಹೊಸಮನಿ, ಈರಣ್ಣ ಕುಂಬಾರ, ರವಿಕಾಂತ್ ಆಫ್ಜಲ್ಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




